ದೀಪಗಳ ಹಬ್ಬದ ಸಡಗರ. ಕಾರ್ತಿಕ ಮಾಸದ ಕತ್ತಲನ್ನು ಓಡಿಸುವ ಹಣತೆಗಳನ್ನು ಸಾಲು ಸಾಲಾಗಿ ಹಚ್ಚಿ , ಪಟಾಕಿ ಸಿಡಿಸಿ, ಸಿಹಿತಿನಿಸುಗಳನ್ನು ಹಂಚಿ ಸಂಭ್ರಮಿಸುವ ಹಬ್ಬದ ಸಡಗರ ಎಲ್ಲೆಡೆ.
ಆಧ್ಯಾತ್ಮಿಕ ಮಹತ್ವವನ್ನು ಹೊಂದಿರುವ ಈ ಹಬ್ಬದಂದು ಮನೆಮನೆಗಳಲ್ಲಿಮಾತ್ರವಲ್ಲ ಎಲ್ಲಾ ದೇಗುಲಗಳಲ್ಲಿಯೂ ಸಂಭ್ರಮ ಮನೆ ಮಾಡಿರುತ್ತದೆ. ದೇಗುಲದಲ್ಲಿ ಲಕ್ಷಾಂತರ ಹಣತೆಗಳನ್ನು ಹಚ್ಚಿ, ತುಪ್ಪದ ದೀಪಗಳನ್ನು ಬೆಳಗಿ ಭಕ್ತರು ತಮ್ಮ ಮನದ ಅಂಧಕಾರ, ಜಗದ ಕಷ್ಟಗಳು ಕಳೆದು ಲೋಕ ಕಲ್ಯಾಣವಾಗಲಿ ಎಂದು ಪ್ರಾರ್ಥಿಸುತ್ತಾರೆ.
ದೀಪಾವಳಿ ಆಚರಣೆ
ಅ. 30: ಸಾಯಂಕಾಲ ಜಲ ಪೂರಣಂ ರಾತ್ರೌ ಚಂದ್ರೋದಯೇ ತೈಲಾಭ್ಯಂಗ: ಗಂ. 05.17
ಅ. 31 ನರಕ ಚತುರ್ದಶೀ ಯಮತರ್ಪಣಂ ದೀಪಾವಳಿ ಲಕ್ಷ್ಮಿಪೂಜೆ
ನ. 01: ದೀಪಾವಳಿ ಅಮಾವಾಸ್ಯೆ, ಆಕಾಶ ದೀಪ : ಕಾರ್ತಿಕ ಸ್ನಾನಾರಂಭ
ನ. 02: ಗೋ ಪೂಜೆ, ಬಲೀಂದ್ರ ಪೂಜೆ, ಅಂಗಡಿ ಪೂಜೆ, ತುಳಸಿ ಪೂಜಾರಂಭ
ನ. 13: ಉತ್ಥಾನ ದ್ವಾದಶಿ, ತುಳಸಿ ಪೂಜೆ