
ಹೊರನಾಡು: ಶ್ರೀ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಫೆ 28ರಿಂದ ಮಾ. 4ರ ವರೆಗೆ ಜಾತ್ರಾಮಹೋತ್ಸವ ನಡೆಯಲಿದೆ ಎಂದು ಹೊರನಾಡಿನ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.
ಐದು ದಿನಗಳ ಕಾಲ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಫೆ 28ರಂದು ರಥೋತ್ಸವಾಂಗ ಶ್ರೀ ಗಣಪತಿ ಪೂಜೆ, ಮಹಾ ಗಣಪತಿ ಹೋಮ ಮತ್ತು ರಾತ್ರಿ ಮಹಾರಂಗಪೂಜೆ ನಡೆಯಲಿದೆ.
ಮಾ 1 ರಂದು ಮಧ್ಯಾಹ್ನ ಧ್ವಜಾರೋಹಣ, ರಾತ್ರಿ ಪುಷ್ಪಕರೋಹಣ. ಮಾ 2ರಂದು ಮಧ್ಯಾಹ್ನ ಬ್ರಹ್ಮರಥೋತ್ಸವ, ರಾತ್ರಿ 10ಕ್ಕೆ ಮಹಾರಥೋತ್ಸವ ನಡೆಯಲಿದೆ.
ಮಾ. 3ರಂದು ಕುಂಕುಮೋತ್ಸವ, ಅವಭೃತಸ್ನಾನ, ರಾತ್ರಿ ಧ್ವಜಾವರೋಹಣ. ಮಾ 4ರಂದು ನಡೆಯುವ ಸಂಪ್ರೋಕ್ಷ ಣೆಯೊಂದಿಗೆ 5 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ತೆರೆಬೀಳಲಿದೆ ಎಂದು ತಿಳಿಸಿದ್ದಾರೆ.