
ಬೇಕಾಗುವ ಸಾಮಗ್ರಿಗಳು: ಮಧ್ಯಮ ಗಾತ್ರದಲ್ಲಿಹೆಚ್ಚಿದ ಹಲಸಿನ ಹಣ್ಣಿನ ಸೊಳೆ – 2 ಕಪ್, ಹಾಲು – 2 ಕಪ್, ನೀರು – 2 ಕಪ್, ರುಚಿಗೆ ಉಪ್ಪು (ಒಂದು ಚಿಟಿಕೆ), ಸಕ್ಕರೆ – 1 ಕಪ್ ಅಥವಾ ರುಚಿಗೆ ತಕ್ಕಷ್ಟು , ಬೆಲ್ಲ- 2 ಚಮಚ (ಬೇಕಿದ್ದರೆ), ರವೆ – 1/4 ಕಪ್, ಏಲಕ್ಕಿಪುಡಿ – 1/4 ಚಮಚ
ತಯಾರಿಸುವ ವಿಧಾನ: ರವೆಯನ್ನು ಸ್ವಲ್ಪ ನೀರು ಸೇರಿಸಿ ಕೈಯಾಡಿಸಿ ನೀರನ್ನು ಬಸಿದು, 10 ನಿಮಿಷ ನೆನೆಯಲು ಬಿಡಿ. ಒಂದು ಪಾತ್ರೆಯಲ್ಲಿ2 ಕಪ್‌ನಷ್ಟು ನೀರನ್ನು ಬಿಸಿಯಾಗಲು ಇಡಿ. ನೀರು ಬಿಸಿಯಾದಾಗ ಅದಕ್ಕೆ ಉಪ್ಪು ಮತ್ತು ಸಕ್ಕರೆ ಸೇರಿಸಿ ಎರಡು ನಿಮಿಷ ಕುದಿಸಿ. ನಂತರ ಇದಕ್ಕೆ ಹೆಚ್ಚಿದ ಹಲಸಿನ ಹಣ್ಣಿನ ಸೊಳೆಗಳನ್ನು ಹಾಕಿ ಒಂದು ನಿಮಿಷ ಬೇಯಿಸಿ. ಹಲಸಿನ ಸೊಳೆ ಬೇಯುತ್ತಿದ್ದಂತೆ ಇದಕ್ಕೆ ರವೆ ಸೇರಿಸಿ ಬಿಡದೆ ಕೈಯಾಡಿಸಿ. ಇಲ್ಲದಿದ್ದರೆ ರವೆ ಗಂಟಾಗಿಬಿಡುತ್ತದೆ. ರವೆ ಬೆಂದು ಮಿಶ್ರಣ ದಪ್ಪಗಾದಾಗ ಇದಕ್ಕೆ ಹಾಲು, ಏಲಕ್ಕಿಪುಡಿ ಸೇರಿಸಿ ಎರಡು ನಿಮಿಷ ಕುದಿಸಿದರೆ ಹಲಸಿನ ಹಣ್ಣಿನ ಪಾಯಸ ಸವಿಯಲು ರೆಡಿ.
