
ಸವಣೂರ: ನಗರದ ಶ್ರೀ ಸತ್ಯಬೋಧ ಸ್ವಾಮಿಗಳ ಮೂಲವೃಂದಾವನ ಸನ್ನಿಧಾನದಲ್ಲಿಗುರುಗಳ 243ನೇ ಆರಾಧನಾ ಮಹೋತ್ಸವ ಮಾರ್ಚ್ 3ರಿಂದ ಆರಂಭಗೊಳ್ಳಲಿದ್ದು, 5ರವರೆಗೆ ನಡೆಯಲಿದೆ.
ಉತ್ತರಾದಿ ಮಠದ ಯತಿಪರಂಪರೆಯಲ್ಲಿಬರುವ ಶ್ರೀ ಸತ್ಯಬೋಧತೀರ್ಥರ ಆರಾಧನಾ ಮಹೋತ್ಸವದ ಅಂಗವಾಗಿ ಪ್ರತಿನಿತ್ಯ ಉದಯರಾಗ, ಅಷ್ಟೋತ್ತರ, ವಿದ್ವಾಂಸರಿಂದ ಉಪನ್ಯಾನ ಗೋಷ್ಠಿ, ರಜತ ರಥೋತ್ಸವ, ಪಂಚಾಮೃತ ಅಭಿಷೇಕ, ಹಸ್ತೋದಕ ಸೇರಿದಂತೆ ಅನೇಕ ಧಾರ್ಮಿಕ ವಿಧಿವಿಧಾನಗಳನ್ನು ಕೈಗೊಳ್ಳಲಾಗುತ್ತದೆ. ಸಂಜೆ ಪಂಡಿತರಿಂದ ಉಪನ್ಯಾಸ, ಪಲ್ಲಕ್ಕಿ ಉತ್ಸವ, ಸಂಗೀತ, ಭಜನೆ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿ ಎಂದು ಶ್ರೀಮಠದ ಪೂಜಾ ಪರ್ಯಾಯಸ್ಥರಾದ ಅವಿನಾಶ ಆಚಾರ್ಯ ಹಾಗೂ ಅಭಿಷೇಕ ಆಚಾರ್ಯ ಪ್ರಕಟಣೆಯಲ್ಲಿತಿಳಿಸಿದ್ದಾರೆ.
























