ದೇವರ ಪೂಜೆಗೆ ಬಳಸುವ ಹೂಗಳು ಹೀಗಿರಲಿ…

ಯಾವುದೇ ದೇವರ ಪೂಜೆ ಮಾಡಲು ಪ್ರಮುಖವಾಗಿ ಬೇಕಾಗಿರುವುದು ಪುಷ್ಪಗಳು. ದೇವರು ರತ್ನಾಭರಣಗಳಿಂದಾಗಲಿ, ವಸ್ತ್ರಾಭರಣಗಳಿಂದ ಹಾಗೂ ಹಣದಿಂದಾಗಲಿ ಪ್ರಸನ್ನರಾಗುವುದಿಲ್ಲ ದೇವರುಗಳು ಪುಷ್ಪಗಳ ಅಲಂಕಾರದಿಂದ ಪ್ರಸನ್ನರಾಗುತ್ತಾರೆ.

ಯಾವುದೇ ಪೂಜೆ ಆಗಿರಲಿ ಅಶುದ್ಧವಾಗಿರುವ, ಸೀಳಿರುವ, ಕ್ರಿಮಿಗಳಿಂದ ತಿನ್ನಲ್ಪಟ್ಟ ಚೂರು ಚೂರಾಗಿರುವ, ನೆಲದ ಮೇಲೆ ಬಿದ್ದಿರುವ ಬೇರೆ ತೋಟದಿಂದ ಕದ್ದು ತಂದಿರುವ ಪುಷ್ಪಗಳನ್ನು ಪೂಜೆಗೆ ಬಳಸಬಾರದು.

ಬೆಳಗ್ಗೆ 12 ಗಂಟೆಯ ನಂತರ ಹೂವಿನ ಗಿಡದಿಂದ ತೆಗೆದ ಹೂಗಳನ್ನು ಪೂಜೆಗೆ ಬಳಸಬಾರದು ಹಾಗೂ ಗಿಡಗಳಿಂದ ಹೂವುಗಳನ್ನು ತೆಗೆಯಬಾರದು.

ಕಮಲದ ಹೂಗಳು ಲಕ್ಷ್ಮಿ ದೇವಿಗೆ ಪ್ರಿಯವಾದ ಹೂ, ಸಂಪಿಗೆ ಹೂ ಅರ್ಧ ಅರಳಿದ್ದರೂ ಪೂಜೆಗೆ ಬಳಸಬಹುದು. ಬೇರೆಯ ಹೂಗಳು ಪೂರ್ತಿ ಅರಳಿದ ಮೇಲೆ ಪೂಜಿಸಬೇಕು. ಮೊಗ್ಗಿನ ಹೂಗಳಿಂದ ಪೂಜಿಸಬಾರದು. ತುಳಸಿಯು ಶ್ರೀ ಕೃಷ್ಣ ಪರಮಾತ್ಮನಿಗೆ ಅತ್ಯಂತ ಪ್ರಿಯವಾಗಿರುತ್ತದೆ. ಶಿವನನ್ನು ಪೂಜಿಸಲು ನಾಗಲಿಂಗ ಕುಸುಮವು ಶ್ರೇಷ್ಠವಾಗಿರುತ್ತದೆ.

(ಸಂಗ್ರಹ)

Related Articles

ಪ್ರತಿಕ್ರಿಯೆ ನೀಡಿ

Latest Articles