ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ವತಿಯಿಂದ ಬೆಂಗಳೂರಿನ ವಯ್ಯಾಲಿಕಾವಲ್ ನಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದು ಏರ್ಪಡಿಸಿದ್ದ “ಊಂಜಲ್ ಸಂಗೀತೋತ್ಸವ” ಕಾರ್ಯಕ್ರಮದಲ್ಲಿ ರಮ್ಯಾ ಸುಧೀರ್ ಅವರು ಅನ್ನಮಯ್ಯ ಕೀರ್ತನೆಗಳಾದ “ಆದಿಪುರುಷ ಅಖಿಲಾಂತರಂಗ”, “ತಿರು ತೋರು ಜವರಾವ” ಮತ್ತು ಶ್ರೀ ಪುರಂದರದಾಸರ ರಚನೆಯಾದ “ಜೋ ಜೋ ಶ್ರೀ ಕೃಷ್ಣ” ಎನ್ನುವ ಮೂರು ಕೃತಿಗಳನ್ನು ಮೊದಲಿಗೆ ಹಾಡಿ, ಸ್ವಾಮಿಗೆ ಆರತಿಯಾದ ನಂತರ, “ದುರಿತಗಜ” (ಶ್ರೀಪಾದರಾಜರು), “ಇಂದು ನಿನ್ನ ಮೊರೆಯ ಹೊಕ್ಕೆ” (ಪುರಂದರದಾಸರು), “ಏನು ಪುಣ್ಯವ” (ಕರಿಗಿರಿದಾಸರು), “ಅಭಯಗಿರಿವಾಸ” (ವಿಜಯದಾಸರು), “ಬಾರಯ್ಯ ಶ್ರೀನಿವಾಸ” (ವಿಜಯದಾಸರು), “ಶರಣು ಶೇಷಾಚಲ” (ವಿಜಯದಾಸರು), “ಕಂಡೆ ಕಂಡೆ ಕಂಡೆ” (ಪುರಂದರದಾಸರು), “ಯಶೋದೆ ನಿನ್ನ ಕಂದಗೆ” (ಪುರಂದರದಾಸರು), “ಏಕೆ ಮಲಗಿದೆ ಹರಿಯೆ” (ಗೋಪಾಲದಾಸರು), “ಆವ ಕುಲವೋ ರಂಗ” (ವಾದಿರಾಜರು), “ಶ್ರೀ ಹರಿ ಕಾಯೋ” (ಮಹಿಪತಿದಾಸರು), “ಪವಮಾನ ಜಗದ ಪ್ರಾಣ” (ವಿಜಯದಾಸರು), “ಏನ್ಸವಿ ಏನ್ಸವಿ ಹರಿನಾಮ” (ಪುರಂದರದಾಸರು), “ಹರಿನಾರಾಯಣ” (ಪುರಂದರದಾಸರು) ಮತ್ತು “ವೇಣುನಾದ ಬಾರೋ” ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.
ವಾದ್ಯ ಸಹಕಾರದಲ್ಲಿ, ವಾಸುಕಿ ಪರಿಮಳ (ಪಿಟೀಲು), ರಂಜನಿ (ಮೃದಂಗ)ದಲ್ಲಿ ಸಾಥ್ ನೀಡಿದರು.