ಬೆಂಗಳೂರು: ಜಯನಗರದ 5 ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಗುರುವಾರದ ಪ್ರಯುಕ್ತ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಅಭಿಷೇಕ, ಅಲಂಕಾರ, ಮಹಾ ಮಂಗಳಾರತಿಯೊಂದಿಗೆ ನೆರವೇರಿತು.

ನಂತರ ಸೇವಾಕರ್ತರಿಗೆ ಹಾಗೂ ಸಾರ್ವಜನಿಕ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು.

ರಾಯರ ಸನ್ನಿಧಿಯಲ್ಲಿ ಸಂಜೆ ಉತ್ಸವಗಳು ಹಾಗೂ ಕಾರ್ತಿಕ ಮಾಸದ ದೀಪೋತ್ಸವದೊಂದಿಗೆ 7- 30 ಕ್ಕೆ ಅಪರ್ಣ ಆನಂದ್ ರವರ ನಿರ್ದೇಶನದಲ್ಲಿ “ಆರಾಧನಾ”ಸಂಸ್ಥೆಯ ವಿದ್ಯಾ ರ್ಥಿಗಳಿಂದ “ಭರತನಾಟ್ಯ” ಕಾರ್ಯಕ್ರಮವೂ ವಿಶೇಷವಾಗಿ ಜರುಗಿತು. ಈ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪುರೋಹಿತ್ ನಂದಕಿಶೋರ್ ಆಚಾರ್ಯರು ಮಾತನಾಡಿ, ಶ್ರೀ ಸುಧೀಂದ್ರ ದೇಸಾಯಿಯವರ ಸಹಕಾರದೊಂದಿಗೆ ಮಠದಲ್ಲಿ ಪ್ರತಿ ಗುರುವಾರದಂದು ಶ್ರೀ ಹರಿ ಭಜನೆ, ಪ್ರವಚನ, ದಾಸವಾಣಿ, ಭರತನಾಟ್ಯ, ಶ್ರೀಹರಿಕಥೆ, ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮವು ನೆರವೇರಲಿದೆ ಈ ಸಂದರ್ಭದಲ್ಲಿ ಭಕ್ತಾದಿಗಳು ಭಾಗವಹಿಸಿ ಶ್ರೀ ಗುರುರಾಯರ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ತಿಳಿಸಿದರು.
























