ಹುಣಸೆ ಹಣ್ಣಿನ ಜ್ಯೂಸ್ ಬಾಯಿಗೆ ರುಚಿ ನೀಡುವುದಲ್ಲದೇ ಆರೋಗ್ಯ ದೃಷ್ಟಿಯಿಂದಲೂ ಬಹಳ ಒಳ್ಳೆಯದು. ಇದರ ಸೇವನೆಯಿಂದ ದೇಹದ ತೂಕ ಕಡಿಮೆಯಾಗುತ್ತದೆ. ಪಿತ್ತ ಉಂಟಾದರೆ ಹುಣಸೆ ಹಣ್ಣಿನ ಜ್ಯೂಸ್ ಮಾಡಿ ಕುಡಿಯಬಹುದು. ರಕ್ತ ಶುದ್ಧಿಗೂ ಹುಣಸೆ ಹಣ್ಣು ಒಳ್ಳೆಯ ಮದ್ದು
ಹುಣಸೆ ಹಣ್ಣಿನ ಜ್ಯೂಸ್ ಮಾಡುವುದು ಬಹಳ ಸುಲಭ.
ಒಂದು ಪಾತ್ರೆಗೆ ೨ ಲೋಟ ನೀರು ಹಾಕಿ ಕುದಿಸಿರಿ. ನೀರು ಕುದಿಯಲು ಆರಂಭಿಸಿದಾಗ ಉರಿ ಕಡಿಮೆ ಮಾಡಿ. ಅದಕ್ಕೆ ಹುಣಸೆ ಹಣ್ಣು ಹಾಕಿ ಆಫ್ ಮಾಡಿ. ತಣ್ಣಗಾದ ನಂತರ ಸೋಸಿ ಅದಕ್ಕೆ ಜೇನುತುಪ್ಪ ಸೇರಿಸಿ ಐಸ್ಕ್ಯೂಬ್ ಹಾಕಿ ಕುಡಿಯಿರಿ.