ವಿಸ್ಮೃತಿ ನೃತ್ಯೋತ್ಸವ ಡಿ.4 ರಂದು ತಮೋಹ ಆರ್ಟ್ಸ್ ಫೌಂಡೇಷನ್ ಪ್ರಸ್ತುತಿ

ಬೆಂಗಳೂರು: ತಮೋಹ ಆರ್ಟ್ಸ್ ಫೌಂಡೇಷನ್ ವಿಸ್ಮೃತಿ ನೃತ್ಯೋತ್ಸವ- 2021 ಕಾರ್ಯಕ್ರಮವನ್ನು ಡಿ. 4 ರಂದು ಬೆಳಗ್ಗೆ 9 ಗಂಟೆಯಿಂದ ಮಲ್ಲೇಶ್ವರ 14ನೇ ಕ್ರಾಸ್‌ನಲ್ಲಿರುವ ಸೇವಾ ಸದನದಲ್ಲಿ ಹಮ್ಮಿಕೊಂಡಿದೆ.

ಬೆಂಗಳೂರಿನ ಶಾಂತಲಾ ಆರ್ಟ್ಸ್ ಅಕಾಡೆಮಿ ಕಲಾ ನಿರ್ದೇಶಕರಾದ ವಿದ್ವಾನ್ ಪುಲಿಕೇಶಿ ಕಸ್ತೂರಿ ಅವರು ನೃತ್ಯೋತ್ಸವಕ್ಕೆ ಚಾಲನೆ ನೀಡುವರು.


ಭರತನಾಟ್ಯ ಕಲಾವಿದರಾದ ಅತುಲಾ ಚಂದ್ರಶೇಖರ್, ಶಶಾಂಕ ಕಿರಣ್ ನಾಯರ್, ಮಯೂರಿ ಕಾರಂತ, ಪಿ. ಆದ್ಯಾ ಮಯ್ಯ, ಸಿ. ಜಯಲತಾ, ವಿದ್ವಾನ್ ವಿನ್ಸೆಂಟ್ ಪೌಲ್, ಪ್ರಶಾಂತಿ ಸತೀಶ್, ವಿದುಷಿ ಮಹಿಮಾ ಹರೀಶ್ ಅವರು ಕಲಾ ಪ್ರದರ್ಶನ ನೀಡಲಿದ್ದಾರೆ. ಕಾರ್ಯಕ್ರಮದ ೨ನೇ ಹಂತದಲ್ಲಿ ಯಕ್ಷದೇಗುಲದ ಶ್ರೀರಾಮ ಹೆಬ್ಬಾರ್ ಅವರಿಂದ ವಿಶೇಷ ಯಕ್ಷಗಾನ, ಮೇಘನಾ ಚಂದ್ರಮೌಳಿ ಮತ್ತು ಪ್ರಿಯಾಂಕಾ ರಾಮಚಂದ್ರಯ್ಯ ಅವರಿಂದ ಕೂಚಿಪುಡಿ ನೃತ್ಯ, ವಿದ್ವಾನ್ ಮೈಸೂರು ಬಿ. ನಾಗರಾಜ್ ಶಿಷ್ಯೆಯರಿಂದ ವಿಶೇಷ ಕಥಕ್ ನೃತ್ಯ, ಮಹಿಮಾ ದಶ್ ಮತ್ತು ನಂದನಾ ಶಶಿಕುಮಾರ್‌ರಿಂದ ಒಡಿಸ್ಸಿ ನೃತ್ಯ, ಚೈತ್ರಾ ಅನಂತ್ ಮತ್ತು ಎಂ. ರಾಜೇಶ್ವರಿ ಭರತನಾಟ್ಯ ಪ್ರಸ್ತುತಿ ಸಂಪನ್ನಗೊಳ್ಳಲಿದೆ ಎಂದು ಕಾರ್ಯಕ್ರಮ ಆಯೋಜಕರಾದ ತಮೋಹ ಆರ್ಟ್ಸ್ ಫೌಂಡೇಷನ್ ನಿರ್ದೇಶಕಿ ವಿದುಷಿ ಗಾಯತ್ರಿ ಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles