ಬೆಂಗಳೂರು: ಚಾಮರಾಜಪೇಟೆಯ ಶ್ರೀ ಸತ್ಯನಾರಾಯಣ ಸ್ವಾಮಿ ಶ್ರೀ ಮಹಾಲಕ್ಷ್ಮಿ ಹಾಗೂ ಮುತ್ತಿನ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಧನುರ್ಮಾಸ ಹಾಗೂ ಹನುಮಾನ್ ಜಯಂತಿ ಹಾಗೂ ವೈಕುಂಠ ಏಕಾದಶಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಡಿಸೆಂಬರ್ 16 ರಿಂದ ಜನವರಿ 15 ವರೆಗೂ ಧನುರ್ಮಾಸ ಪೂಜಾ ಪ್ರಾರಂಭ ಪ್ರತಿನಿತ್ಯ ಶ್ರೀ ಸ್ವಾಮಿಯವರಿಗೆ 4 ಗಂಟೆಗೆ ಅಭಿಷೇಕ ನಿತ್ಯ ಆರಾಧನೆ ನಿತ್ಯ ಕೈಂಕರ್ಯಗಳು ನಿವೇದನೆ ಅರ್ಚನೆ 05:30 ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ನಡೆಯಲಿವೆ.
ಡಿಸೆಂಬರ್ 16 ರಂದು ಹನುಮಂತ ಜಯಂತಿ ಪ್ರಯುಕ್ತ ಶ್ರೀ ಮುತ್ತಿನ ಅಂಜನೇಯಸ್ವಾಮಿಗೆ ಬೆಳಗ್ಗೆ 7 ಗಂಟೆಗೆ ಪಂಚಾಮೃತ ಅಭಿಷೇಕ ನಿತ್ಯ ಕೈಂಕರ್ಯಗಳು ಅರ್ಚನೆ ಬೆಳಗ್ಗೆ 10:30 ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ.
ಜನವರಿ 13 ರಂದು ವೈಕುಂಠ ಏಕಾದಶಿ ಪ್ರಯುಕ್ತ ಶ್ರೀ ಸತ್ಯನಾರಾಯಣ ಸ್ವಾಮಿಗೆ ಬೆಳಗ್ಗೆ 4ಗಂಟೆಗೆ ಸುಪ್ರಭಾತ ಸೇವೆ ಉತ್ಸವಮೂರ್ತಿಗೆ ನಿತ್ಯ ಕೈಂಕರ್ಯಗಳು, ಆರಾಧನೆ, ಅರ್ಚನೆ, ನಿವೇದನೆ, ಮಂತ್ರ ಪುಷ್ಪ, ಪ್ರಾಕಾರ ಉತ್ಸವ, 5 ಗಂಟೆಗೆ ಉತ್ತರ ಬಾಗಿಲು (ಸ್ವರ್ಗದ ಬಾಗಿಲು) ತೆರೆಯುತ್ತದೆ.
ಓಂ ಶ್ರೀ ಸತ್ಯನಾರಾಯಣ ಸ್ವಾಮಿ ಮೂಲ ವಿಗ್ರಹಕ್ಕೆ ವಜ್ರಕವಚ ಧಾರಣೆ ವಿಶೇಷ ಅಲಂಕಾರ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣ ಸಂಗೀತ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿದ್ದು, ರಾತ್ರಿ 10.30 ಏಕಾಂತ ಸೇವೆ ನಡೆಯಲಿದೆ ಎಂದು ದೇಗುಲದ ಪ್ರಕಟಣೆ ತಿಳಿಸಿದೆ.