ಬೆಂಗಳೂರು: ನಾದಸುಧಾ ಸಂಗೀತ ಕಲಾ ಮಂದಿರ ಪ್ರಸ್ತುತಪಡಿಸುವ ಸಂಗೀತ ಸಂಜೆ ಕಾರ್ಯಕ್ರಮ ಡಿಸೆಂಬರ್ 26 ರಂದು ಸಂಜೆ 4.30ಕ್ಕೆ ಮಲ್ಲೇಶ್ವರಂ ನಲ್ಲಿರುವ (ಅಂಚೆ ಕಚೇರಿ ಹತ್ತಿರ) ಶ್ರೀ ರಾಮಮಂದಿರದಲ್ಲಿ ನಡೆಯಲಿದೆ.
ಸಂಗೀತ ಶಿಕ್ಷಕಿ ವಿದುಷಿ ವಿಜಯಾಭಟ್ ಅವರ ನೇತೃತ್ವದಲ್ಲಿ ನಾದಸುಧಾ ಸಂಗೀತ ಕಲಾಮಂದಿರದ ಮಕ್ಕಳು ಶಾಸ್ತ್ರೀಯ ಸಂಗೀತ ಹಾಗೂ ದೇವರ ನಾಮ ಪ್ರಸ್ತುತ ಪಡಿಸಲಿದ್ದಾರೆ.
ವಾದ್ಯ ಸಹಕಾರ: ವಿದ್ವಾನ್ ಶಂಕರ್ ಹೊಸಕೋಟೆ (ಮೃದಂಗ), ವಿದ್ವಾನ್ ಅರ್ಜುನ್ (ಪಿಟೀಲು).
ನಾದಸುಧಾ ಬೆಳೆದು ಬಂದ ಹಾದಿ
2012 ನೇ ಇಸವಿ. ನಾದಸುದಾ ಸಂಗೀತ ಅಕಾಡೆಮಿಯ ಬೆನ್ನೆಲುಬಾಗಿ ಹಾಗೂ ಆಧಾರ ಸ್ತಂಭವಾಗಿ ವಿದುಷಿ ವಿಜಯಭಟ್ ರವರು ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹತ್ತು ಮಕ್ಕಳಿಂದ ಪ್ರಾರಂಭವಾದ ಈ ಕಲಾಮಂದಿರ ಇನ್ನೂರಕ್ಕಿಂತಲೂ ಹೆಚ್ಚು ಮಕ್ಕಳಿಗೆ ಸಂಗೀತಾಭ್ಯಾಸ ಮಾಡಿ, ನೂರು ಮಕ್ಕಳು ಜೂನಿಯರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ನಾದಸುಧಾ ಕಲಾಮಂದಿರ ಪ್ರತಿವರ್ಷವೂ ತ್ಯಾಗರಾಜ ಆರಾಧನೆಯನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿದೆ. ಇದಕ್ಕೆ ಮುಖ್ಯ ಕಾರಣ ವಿಜಯಾ ಭಟ್ ಅವರು.ಶಾಸ್ತ್ರೀಯ ಸಂಗೀತವಲ್ಲದೆ ದೇವರನಾಮವನ್ನೂ ಇಲ್ಲಿ ಹೇಳಿಕೊಡಲಾಗುತ್ತದೆ.ನಮ್ಮ ಸಂಗೀತ ಶಾಲೆಯಲ್ಲಿ ಜೂನಿಯರ್, ಸೀನಿಯರ್ ಪಾಠಗಳನ್ನು ಪರೀಕ್ಷೆಯ ಮಟ್ಟಕ್ಕೂ ಹಾಗೂ ವಿದ್ವತ್ ಕೃತಿಗಳನ್ನೂ ಹೇಳಿಕೊಡುತ್ತಿದ್ದಾರೆ. ಈ ಅಕಾಡೆಮಿಯ ಮುಖ್ಯಸ್ಥರಾದ ವಿಜಯಾಭಟ್ ಅನೇಕ ಸಂಗೀತ ಕಛೇರಿಗಳನ್ನು ನೀಡಿದ್ದಾರೆ. ಅದಲ್ಲದೆ ಎಲ್ಲಾ ಮಕ್ಕಳಿಗೂ ಹಾಡುವ ಅವಕಾಶವನ್ನು ನೀಡುತ್ತಿದ್ದಾರೆ. ಅವರ ಜೊತೆಯಲ್ಲೂ ಹಾಡುವ ಅವಕಾಶ ನೀಡುತ್ತಿದ್ದಾರೆ.