ಸಾಲಿಗ್ರಾಮ: ಶ್ರೀಗುರು ನರಸಿಂಹ ದೇವಸ್ಥಾನದಲ್ಲಿ ಶ್ರೀ ದೇವರ ಬ್ರಹ್ಮರಥೋತ್ಸವ ಜನವರಿ 16 ರಂದು ನಡೆಯಲಿದ್ದು, ಈ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ಜ. 9 ರಿಂದ ಆರಂಭಗೊಳ್ಳಲಿದೆ.
ಜ. 9: ಬೆಳಗ್ಗೆ 9.30 ಕ್ಕೆ ರಥಾರಂಭ (ರಥ ರಚನೆಯ ಪ್ರಕ್ರಿಯೆಗೆ ಚಾಲನೆ).
ಜ. 13 ರಂದು ಸಂಜೆ ಶ್ರೀ ಆಂಜನೇಯ, ಶ್ರೀ ಮಹಾಗಣಪತಿ, ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ರಂಗಪೂಜೆ, ಸಂಜೆ 7.30 ಕ್ಕೆ ಮುಹೂರ್ತ ಬಲಿ, ಅಂಕುರಾರೋಪಣ, ಕಿರಿ ರಂಗಪೂಜೆ.
ಜ. 14ರಂದು ಮಕರ ಸಂಕ್ರಮಣ, ಗಣಹೋಮ, ನರಸಿಂಹ ಹೋಮ, ಉತ್ಸವ ಬಲಿ, ಮಧ್ಯಾಹ್ನ ರಜತ ರಥೋತ್ಸವ, ಸಂಜೆ 7.30 ಕ್ಕೆ ಧ್ವಜಾರೋಹಣ, ಕಿರಿ ರಂಗಪೂಜೆ, ಉತ್ಸವ ಬಲಿ.
ಜ.15: ಪೂರ್ವಾಹ್ನ ಕಲಷಾಭಿಷೇಕ, ವೇದಪಾರಾಯಣ, ಸಂಜೆ 5.30 ರಿಂದ ಸುತ್ತುಸೇವೆ, ಪಲ್ಲಕ್ಕಿ ಉತ್ಸವ, ಪುರ ಮೆರವಣಿಗೆ, ಕಟ್ಟೆಪೂಜೆ, ರಾತ್ರಿ ಹಿರೇರಂಗಪೂಜೆ, ಉತ್ಸವಬಲಿ, ಪುಷ್ಪರಥೋತ್ಸವ.
ಜ.16 : ಬೆಳಗ್ಗೆ 10.15 ರ ಕುಂಭ ಲಗ್ನದಲ್ಲಿ ಶ್ರೀದೇವರ ರಥಾರೋಹಣ, ನಂತರ ಮಹಾರಥೋತ್ಸವ. ಸಂಜೆ 6 ಗಂಟೆಗೆ ರಥಾವರೋಹಣ, ಓಲಗ ಮಂಟಪದಲ್ಲಿ ಅಷ್ಟಾವಧಾ ಸೇವೆ, ಭುತಬಲಿ, ಶಯನೋತ್ಸವ.
ಜ.17 ರಂದು ಬೆಳಗ್ಗೆ 8 ಪ್ರಭೋದೋತ್ಸವ, ಸಂಜೆ 5.30ರಿಂದ ಓಕುಳಿ ಸೇವೆ, ರಜತ ರಥೋತ್ಸವ, ಅವಭೃತ ಸ್ನಾನ (ಕೋಟದ ಹಂದೆ ಶ್ರೀ ವಿಷ್ಣು ಮಹಾಗಣಪತಿ ದೇವಸ್ಥಾನದಲ್ಲಿ) ಅಷ್ಟಾವಧಾನ ಸೇವೆ, ಕಟ್ಟೆ ಓಲಗ, ಪುರಮೆರವಣಿಗೆ, ಧ್ವಜಾವರೋಹಣ, ವಸಂತಾರಾಧನೆ, ಮಂತ್ರಾಕ್ಷತೆ.
ಜ.18 ರಂದು ಬೆಳಗ್ಗೆ ಸಂಪ್ರೋಕ್ಷಣೆ, ಗಣಹೋಮ.
ಜನವರಿ 4 ರಿಂದ ಶಾಕಲ ಋಕ್ ಸಂಹಿತಾ ಯಾಗ
ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ಜನವರಿ 4 ರಿಂದ 11ರವರೆಗೆ ಶಾಕಲ ಋಕ್ ಸಂಹಿತಾ ಯಾಗ ದೇಗುಲದ ವತಿಯಿಂದ ನಡೆಯಲಿದೆ.
























