ರೈತ ಮಹಿಳೆಯರ ಸಮಾವೇಶ ಜ. 2 ರಂದು

ಮುನವಳ್ಳಿ: ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಜೈಂಟ್ಸ್ ಗ್ರೂಪ್ ಆಫ್ ರಾಣಿ ಚೆನ್ನಮ್ಮ ಸಹೇಲಿ ಹಾಗೂ ಜೈಂಟ್ಸ್ ಗ್ರೂಪ್ ಆಫ್ ಮುನವಳ್ಳಿ ಇವರ ಸಹಯೋಗದಲ್ಲಿ ಜನವರಿ 2 ರಂದು ಬೆಳಗ್ಗೆ 10 ಗಂಟೆಗೆ ರೈತ ದಿನಾಚರಣೆ ಅಂಗವಾಗಿ ರೈತ ಮಹಿಳಾ ಸಮಾವೇಶ ಹಾಗೂ ಪ್ರೌಢಶಾಲಾ ಮಕ್ಕಳಿಂದ ರೈತ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮುನವಳ್ಳಿ-ಭಂಡಾರ ಹಳ್ಳಿ ಸೋಮಶೇಖರಮಠದ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು. ರಾಣಿ ಚನ್ನಮ್ಮ ಸಹೇಲಿಯ ಅಧ್ಯಕ್ಷ ಜ್ಯೋತಿ ಚನ್ನಪ್ಪ ಯಲಬುರ್ಗಿಅಧ್ಯಕ್ಷತೆ ವಹಿಸುವರು. ಸವದತ್ತಿ ತಾಲೂಕಿನ ಜನಪ್ರತಿನಿಧಿ ಪಂಚನಗೌಡ ದ್ಯಾಮನಗೌಡರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ರಾಷ್ಟ್ರಪ್ರಶಸ್ತಿ ಪುರಸ್ಕೃತ ರೈತ ಮಹಿಳೆ ಕವಿತಾ ಮಿಶ್ರಾ ಹಾಗೂ ಮುನವಳ್ಳಿಯ ಮಹಾಲಕ್ಷ್ಮೀ ಕೋ-ಆಪ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷರಾದ ಶಾರದಾ ಪಂ. ದ್ಯಾಮನಗೌಡ್ರ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.

ಅತಿಥಿಗಳಾಗಿ ಮುನವಳ್ಳಿಯ ಜೈಂಟ್ಸ್ ಗ್ರೂಪ್‌ನ ಅಧ್ಯಕ್ಷರಾದ ಬಸವರಾಜ ಅಂಗಡಿ ಪುರಸಭೆ ಮುಖ್ಯಾಧಿಕಾರಿಗಳಾದ ಮಹೇಂದ್ರ ತಿಮ್ಮಾಣಿ, ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಎಸ್.ಎ. ಸಿದ್ದಣ್ಣ, ಕೃಷಿ ಅಧಿಕಾರಿಗಳಾದ ಎಸ್.ಎಲ್. ದೇಸಾಯಿ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles