ಬೆಂಗಳೂರು: ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ108 ಶ್ರೀ ಸುಬುಧೇಂ ದ್ರ ತೀರ್ಥ ಶ್ರೀ ಪಾದಂಗಳವರ ಆದೇಶದಂತೆ ಶ್ರೀ ಗುರುರಾಯರ ಪೂರ್ವಿಕ ಗುರುಗಳ “ಶ್ರೀ ಜಿತಾಮಿತ್ರತೀರ್ಥರ” ಆರಾಧನೆಯ ಮಹೋತ್ಸವದ ಅಂಗವಾಗಿ ವಿದ್ವಾಂಸರುಗಳಾದ ವಿದ್ವಾನ್ -ಚತುರ್ವೇದಿ ವೇದವ್ಯಾಸಾಚಾರ್ಯರು ಹಾಗೂ ಶ್ರೀ ಪವಮಾನಾಚಾರ್ಯ ಶ್ರೀ ಜಗನ್ನಾಥಾಚಾರ್ಯ ರಿಂದ ಪ್ರವಚನ ಮಾಲಿಕೆ ನಡೆಯಿತು.
ನಂತರ ಪಲ್ಲಕ್ಕಿ ಉತ್ಸವ, ಕನಕಾಭಿಷೇಕ ಅಲಂಕಾರ ಇತ್ಯಾದಿ ಪೂಜಾ ಕೈಂಕರ್ಯಗಳು ನೆರವೇರಿದವು ಈ ಸಂದರ್ಭದಲ್ಲಿ ವ್ಯವಸ್ಥಾಪಕ ರಾದ ಆರ್, ಕೆ ವಾದೀಂದ್ರಾಚಾ ರ್ಯ, ಜಿ ,ಕೆ ಆಚಾರ್ಯ, ಎಸ್ ಎನ್, ವೆಂಕಟೇಶಾಚಾರ್ಯ, ಕಿಶೋರ್ ಆಚಾರ್ಯ, ಶ್ರೀನಿಧಿ ಆಚಾರ್ಯ ಮೊದಲಾದವರು ಹಾಗೂ ಭಗವದ್ಭ ಕ್ತರು ಭಾಗವಹಿಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾದರು.