ಭರತನಾಟ್ಯ ಪ್ರದರ್ಶನ

ಬೆಂಗಳೂರು: ಶ್ರೀ ವಿಜಯವಿಠಲದಾಸ ಸೇವಾ ಬಳಗದ ವತಿಯಿಂದ ‘ಶ್ರೀ ವಿಜಯದಾಸರ ಆರಾಧನಾ ಮಹೋತ್ಸವವನ್ನು ಜನವರಿ 2ರಂದು ನಗರದ ಬಸವನಗುಡಿಯ ಶ್ರೀ ಮಲ್ಲಿಕಾರ್ಜುನ ದೇವಾಲಯ ಆವರಣದಲ್ಲಿರುವ ಭ್ರಮರಾಂಬಿಕಾ ಮಂಗಳ ಸದನದಲ್ಲಿ ಏರ್ಪಡಿಸಲಾಗಿತ್ತು.

ಸಾಮಾಜಿಕ ಜಾಲತಾಣದ 108 ಗಾಯಕಿಯರಿಂದ ಶ್ರೀ ವಿಜಯದಾಸರ ಕೃತಿಗಳ ಸಮೂಹ ಗಾಯನ ಸೇವೆ ಸಮರ್ಪಿಸಲಾಯಿತು.

ಇದರಲ್ಲಿ ಮುಖ್ಯ ಅತಿಥಿಗಳಾಗಿ ಪಂ|| ಭೀಮಸೇನಾಚಾರ್ ಅತನೂರು ಮತ್ತು ಪಂ|| ಕೇಶವಾಚಾರ್ಯರು ಉಪಸ್ಥಿತರಿದ್ದರು.‌

ಸಮೂಹ ಗಾಯನದ ಜೊತೆ ‘ಅಭಿಜ್ಞ’ ನೃತ್ಯ ತಂಡದವರಿಂದ ಶ್ರೀ ವಿಜಯದಾಸರ  ‘ಜಗತ್ಪತಿಯ ತೋರಮ್ಮ ಲಕುಮಿ’ ಕೃತಿಯ‌ ನೃತ್ಯ ಪ್ರದರ್ಶನ ನಡೆಯಿತು.

ನೃತ್ಯ ಪ್ರದರ್ಶಿಸಿದ ಕಲಾವಿದರು: ರಂಜಿತಾ ಪ್ರಸಾದ್, ಅಪೂರ್ವ ಸಂತೋಷ್, ಮಾನ್ಯ ಶರತ್, ಕು|| ಶೈಲಜಾ, ಕು||‌ ನಯನಾ, ಕು|| ಧಾತ್ರಿ ವಿ, ಕು|| ಧನ್ವಿ.

Related Articles

ಪ್ರತಿಕ್ರಿಯೆ ನೀಡಿ

Latest Articles