– ರೂಪಶ್ರೀ ಶಶಿಕಾಂತ್, ದಾವಣಗೆರೆ
ಜಯ ಜಯ ಶಂಕರಿ ಜಯ ಶಾಖಾಂಬರಿ ಜಯ ಬನಶಂಕರಿ ಜಯ ಅಂಬೆ ಜಯ ಜಯ ದುಷ್ಟ ಸಂಹಾರಿಣಿ ಶ್ರೀಕರಿ ಜಯ ರಕ್ಷಾಕರಿ ಜಗದಂಬೆ ತ್ರಿಗುಣಾತೀತಳೆ ತ್ರಿನೇತ್ರ ಪ್ರಿಯಳೆ ತ್ರಿಪುರಸುಂದರಿ ಲಲಿತಾಂಬೆ ಅಗಣಿತ ಶಕ್ತಳೆ ಆನಂದ ರೂಪಳೆ ಅನುಪಮ ಚರಿತಳೆ ಮೂಕಾಂಬೆ ರಾಜರಾಜೇಶ್ವರಿ ರಾಕ್ಷಸ ಮರ್ಧಿನಿ ರಾಕೇಂದು ವದನಳೆ ಕಾಯಮ್ಮ ನಿಜಸುಖದಾಯಿನಿ ಜ್ಞಾನ ಪ್ರದಾಯಿನಿ ಕಲ್ಪವೃಕ್ಷಳು ನೀನಮ್ಮ ಅನುದಿನ ನಿನ್ನ ನೆನೆಹನು ನೀಡುತ ಬಾದಾಮಿವಾಸಿನಿ ಪೊರೆಯಮ್ಮ ಮನದಲಿ ಭಕ್ತಿಯ ಮೂಡಿಸಿ ನಮ್ಮನು ಸಿರಿಹರಿ ಅನುಜೆ ಸಲಹಮ್ಮ ಶ್ರೀ ಕೃಷ್ಣಾರ್ಪಣಮಸ್ತು