ಬೆಂಗಳೂರು: ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಮುಜರಾಯಿ ಸಂಸ್ಥೆಗಳ ತಸ್ತೀಕನ್ನು ಪರಿಷ್ಕರಿಸಿ ಹೆಚ್ಚು ಮಾಡುವ ಬಗ್ಗೆ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ-ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ನವೆಂಬರ್ ೧೨ರಂದು ಭೇಟ ಮಾಡಿ ಮನವಿ ಸಲ್ಲಿಸಿದೆ.
ಗ್ರಾಮಾಂತರ ಪ್ರದೇಶದಲ್ಲಿ ಸುಮಾರು ೩೨,೫೦೦ ಸಿ ವರ್ಗದ ದೇಗುಲಗಳಿವೆ. ಈ ದೇವಾಲಯಗಳಲ್ಲಿ ದೇವರ ಪೂಜಾ ಸಾಮಗ್ರಿಗಳನ್ನು ತಂದು ಪೂಜೆ ಮಾಡಲು ತಿಂಗಳಿಗೆ 4 ಸಾವಿರ ರೂ. ಕೊಡುತ್ತಿದ್ದು ದಿನಕ್ಕೆ 130 ರೂ. ಬಳಕೆಗೆ ಸಿಗುತ್ತಿದೆ. ಈಗ ಪೂಜಾ ಸಾಮಗ್ರಿಗಳ ಬೆಲೆ ಹೆಚ್ಚಿರುವುದರಿಂದ ಅದನ್ನು ದಿನಕ್ಕೆ ಕನಿಷ್ಠ ರೂ.250 ಕ್ಕೆ ಏರಿಸಬೇಕು ಎಂದು ಮನವಿ ಮಾಡಲಾಯಿತು.
ಸಚಿವರನ್ನು ಭೇಟಿ ಮಾಡಿದ ತಂಡದಲ್ಲಿ ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್ ದೀಕ್ಷಿತ್, ಅರ್ಚಕ ಕೆ.ಆರ್.ಸತೀಶ್ ಹಾಗೂ ಕೆ.ಎಸ್.ಉಮೇಶ್ ಶರ್ಮ ಇದ್ದರು.