ಊಂಜಲ್ ಸಂಗೀತೋತ್ಸವ

ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ತು ವಯ್ಯಾಲಿಕಾವಲ್ ನಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ “ಊಂಜಲ್ ಸಂಗೀತೋತ್ಸವ” ಕಾರ್ಯಕ್ರಮದಲ್ಲಿ, ವಿದುಷಿ ಸಂಧ್ಯಾ ಶ್ರೀನಾಥ್ ಅವರು, ಮೊದಲಿಗೆ ತಾಳಪಾಕಂ ಅನ್ನಮಾಚಾರ್ಯರ ಕೀರ್ತನೆಗಳಾದ, “ಕೊಮ್ಮಲು ಪಾದ”, “ನಾರಾಯಣತೇ ನಮೋ ನಮೋ”, “ಲಾಲನುಚು ನುಚೇರು”, ಎಂಬ ಕೀರ್ತನೆಗಳನ್ನು ಹಾಡಿ, ನಂತರ ಹರಿದಾಸರ ಪದಗಳಾದ “ಏನು ಪುಣ್ಯವ ಮಾಡಿ” (ಕರಿಗಿರೀಶ), “ಏನೆಂದು ಕೊಂಡಾಡಿ” (ಕನಕದಾಸರು), “ಅಭಯಗಿರಿವಾಸ” (ವಿಜಯದಾಸರು), “ಪವಮಾನ ಜಗದ ಪ್ರಾಣ” (ವಿಜಯದಾಸರು), “ಏನು ಕಾರಣದಿಂದ ಮಲಗಿರುವೆಯೋ” (ವಿಜಯದಾಸರು), “ಶ್ಯಾಮ ಸುಂದರಾಂಗ” (ತ್ಯಾಗರಾಜರು) ಮುಂತಾದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿ ಭಗವಂತನಿಗೆ ಭಕ್ತಿಪೂರ್ವಕವಾಗಿ ಗಾಯನ ಸೇವೆ ಸಲ್ಲಿಸಿದರು.

ಇವರಿಗೆ ಪಕ್ಕವಾದ್ಯದಲ್ಲಿ, ಕೀ-ಬೋರ್ಡ್ ನಲ್ಲಿ ವಿದ್ವಾನ್ ಅಮಿತ್ ಶರ್ಮಾ, ತಬಲಾದಲ್ಲಿ ವಿದ್ವಾನ್ ಶ್ರೀ ನಿವಾಸ ಕಾಖಂಡಕಿ ಅವರು ಸಾಥ್ ನೀಡಿದರು.‌

Related Articles

ಪ್ರತಿಕ್ರಿಯೆ ನೀಡಿ

Latest Articles