ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ ಫೆ. 1 ರಂದು

ಬೆಂಗಳೂರು: ಶ್ರೀ ಶ್ರೀನಿವಾಸ ಉತ್ಸವ ಬಳಗ, ದಾಸ ಸಾಹಿತ್ಯ ಪ್ರಚಾರ ಮಧ್ಯಮ ಬೆಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ ಫೆ.1ರಂದು ಸಂಜೆ ಬಸವನಗುಡಿಯ ಉತ್ತರಾದಿಮಠದ ಶ್ರೀ ಸತ್ಯಪ್ರಮೋದ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಮಧ್ಯಾಹ್ನ 3 ಗಂಟೆಯಿ0ದ ಯಲಹಂಕ ವಿಶ್ವ ಮಧ್ವ ಮಹಾಪರಿಷತ್ ನವರಿಂದ ಭಜನೆ, 3.30 ರಿಂದ ರೇಖಾ ಪದಕಿ ತಂಡದವರಿ0ದ ಭಜನೆ, ೪ರಿಂದ ಜಯನಗರದ ಹಿರಣ್ಮಯಿ ಸಂಗೀತ ಶಾಲೆ, 4.30ರಿಂದ ಸಂತವಾಣಿ ಸುಧಾಕರ್ ತಂಡವರಿ0ದ ಸಮೂಹ ಗಾಯನ, 5 ರಿಂದ ಶ್ರೀ ಪುರಂದರ ಇಂಟರ್‌ನ್ಯಾಷನಲ್ ಟ್ರಸ್ಟ್ನ ಡಾ. ಸುವರ್ಣ ಮೋಹನ್ ತಂಡದವರಿ0ದ ಸಮೂಹ ಗಾಯನ, ಸಂಜೆ 5.30ರಿಂದ ಉಡುಪಿ ಪುತ್ತಿಗೆ ಮಠ ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ.ಬಿ.ಗೋಪಾಲಾಚಾರ್ಯ ಅವರಿಂದ ಉಪನ್ಯಾಸ.
ಸಂಜೆ 6 ರಿಂದ ಸಭಾ ಕಾರ್ಯಕ್ರಮ. ಶ್ರೀ ಜಯತೀರ್ಥ ವಿದ್ಯಾಪೀಠದ ಪ್ರಾಂಶುಪಾಲರಾದ ಡಾ. ಸತ್ಯಧ್ಯಾನಾಚಾರ್ಯ ಕಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉತ್ತರಾದಿಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಂಡಿತ ಶ್ರೀ ವಿದ್ಯಾದೀಶಚಾರ್ಯ ಗುತ್ತಲ್, ಡಾ.ಎ.ಎಸ್.ಸಮೀರ ಸಿಂಹ, ಡಾ.ಎಂ.ಆರ್.ವಿ ಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವಿಶೇಷ ಆಹ್ವಾನಿತರಾಗಿ ಎಸ್.ಎನ್. ಶಂಕರ್, ಡಾ.ಮುರಳಿ, ಎಸ್.ವೆಂಕಟೇಶ ಮೂರ್ತಿ, ನ.ಸುಧೀಂದ್ರ ರಾವ್ ಭಾಗವಹಿಸಲಿದ್ದಾರೆ.
ಸಂಜೆ ೬.೩೯ರಿಂದ ಶ್ರೀ ಪುರಂದರದಾಸರ ನವರತ್ನ ಮಾಲಿಕೆ ಗೀತಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles