ಶ್ರೀ ಗುರುರಾಯರ ಸನ್ನಿಧಿಯಲ್ಲಿ ಭರತನಾಟ್ಯ

ಬೆಂಗಳೂರು: ಜಯನಗರದ 5 ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ 108 ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್,ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಪ್ರತಿ ಗುರುವಾರ ದಂತೆ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಅಭಿಷೇಕ, ಅಲಂಕಾರ, ಕನಕಾಭಿಷೇಕ ಹಾಗೂ ಸಾರ್ವಜನಿಕ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು.

ಸಂಜೆ 6-15 ಕ್ಕೆ ದೀಪೋತ್ಸವ, ಗಜವಾಹನೋತ್ಸವ, ಮಹಾ ಮಂಗಳಾರತಿಯೊಂದಿಗೆ ವಿಶೇಷವಾಗಿ ಸ್ವಯಂಬೋ ನೃತ್ಯ ತಂಡದವರಿಂದ ಭರತನಾಟ್ಯ ಕಾರ್ಯಕ್ರಮವು ನೆರವೇರಿತು.

ಈ ಸಂದರ್ಭದಲ್ಲಿ ಕೃಷ್ಣಚಾರ್ ಪುರೋಹಿತ್ ಮತ್ತು ರಾಘವೇಂದ್ರಾಚಾರ್ ಇವರಿಂದ ಚಂಡೆವಾದನ ಹಾಗೂ ನಾನಾವಿಧ ವಾದ್ಯಗಳಿಂದ ದೀಪೋತ್ಸವ ಸ್ವಸ್ತಿ ವಾಚನ ಮೊದಲಾದ ಉತ್ಸವಗಳ ಕಾರ್ಯಕ್ರಮ ಗಳಲ್ಲಿ ಭಕ್ತರು ಭಾಗವಹಿಸಿ ಶ್ರೀಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು ಎಂದು ಕಿಶೋರ್ ಆಚಾರ್ಯ ತಿಳಿಸಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles