ಕೈವಾರದಲ್ಲಿ ಗುರುಪೂಜಾ -ಸಂಗೀತೋತ್ಸವ

ಕೈವಾರ: ತಾಲ್ಲೂಕಿನ ಪ್ರಸಿದ್ದ ಯಾತ್ರಾಸ್ಥಳ ಕೈವಾರ ಕ್ಷೇತ್ರದ ಶ್ರೀಯೋಗಿನಾರೇಯಣ ಮಠದಲ್ಲಿ ಜುಲೈ 11 ರಿಂದ 13 ರವರೆಗೆ ರಾಷ್ಟçಮಟ್ಟದ ಸಂಗೀತೋತ್ಸವ ಮತ್ತು ಗುರುಪೂಜಾ ಮಹೋತ್ಸವ ನಡೆಯಲಿದೆ.

ಸದ್ಗುರು ಯೋಗಿ ನಾರೇಯಣ ತಾತಯ್ಯನವರ ಸನ್ನಿಧಿಯಲ್ಲಿ ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್ ರವರ ನೇತೃತ್ವದಲ್ಲಿ, ಗುರುಗಳ ಪೂಜೆ ಮತ್ತು ಸಂಗೀತೋತ್ಸವವನ್ನು ಗುರುಪೂರ್ಣಿಮೆಯ ವಿಶೇಷವಾಗಿ 3 ದಿನಗಳು ನಿರಂತರ 72 ಗಂಟೆಗಳ ಕಾಲ ಶ್ರೀಕ್ಷೇತ್ರದಲ್ಲಿ ನಡೆಯುತ್ತದೆ. ಸಂಗೀತ ವಿದ್ವಾಂಸರುಗಳು ಸಂಕೀರ್ತನೆಯನ್ನು ಶ್ರದ್ದಾಭಕ್ತಿಗಳಿಂದ ಗುರುಗಳಿಗೆ ಸಮರ್ಪಿಸಲಿದ್ದಾರೆ.

ಕೈವಾರದ ಸಂಗೀತೋತ್ಸವವು ಸಂಗೀತಕ್ಷೇತ್ರದಲ್ಲಿ ಮಹತ್ವವನ್ನು ಪಡೆದುಕೊಂಡಿದೆ. ಗುರುಪೂಜಾ – ಸಂಗೀತ ಮಹೋತ್ಸವಗಳು ಸುಮಾರು ವರ್ಷಗಳಿಂದಲೂ ಕೈವಾರದಲ್ಲಿ ವಿಜೃಂಭಣೆಯಿ0ದ ನಡೆದುಕೊಂಡು ಬರುತ್ತಿದೆ. ದೇಶದ ವಿವಿಧ ಸಂಗೀತ ವಿದ್ವಾಂಸರುಗಳು ಇಲ್ಲಿ ಬಂದು ಸೇವೆ ಸಲ್ಲಿಸುತ್ತಾರೆ..

ಶ್ರೀ ಯೋಗಿ ನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕರಾದ ವಾನರಾಶಿ ಬಾಲಕೃಷ್ಣ ಭಾಗವತರ್ ರವರು ಮಾತನಾಡುತ್ತಾ ಜುಲೈ 11 ಸೋಮವಾರ ಬೆಳಗ್ಗೆ 6 ಗಂಟೆಗೆ ಗುರುಪೂಜೆ-ಸಂಗೀತೋತ್ಸವ ಆರಂಭವಾಗುತ್ತದೆ. ನಾಡಿನ ಪ್ರಸಿದ್ದ ವಿದ್ವಾಂಸರುಗಳು, ನಾದಸ್ವರ ವಾದಕರು, ಸಂಗೀತಗಾರು ಹಾಗೂ ಕಲೆಯ ನಾನಾ ಪ್ರಕಾರದ ಎಲ್ಲಾ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಕಾಣುವ ಅವಕಾಶ ಒದಗಿಬಂದಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles