ದೀಪಾವಳಿಯ ನಂತರ ಬರುವ ವಿಶೇಷ ಹಬ್ಬವೇ ತುಳಸಿ ಹಬ್ಬ. ಈ ಹಬ್ಬವನ್ನು ಕಾರ್ತೀಕ ಮಾಸದ ಶುಕ್ಲಪಕ್ಷದ ದ್ವಾದಶಿಯಂದು ಆಚರಿಸಲಾಗುತ್ತದೆ. ಉತ್ಥಾನ ದ್ವಾದಶಿ ಅಂದ್ರೆ ತುಳಸಿ ಹಬ್ಬ.
*ರಾಘವೇಂದ್ರ ಹರಿತಸ್ ಗುರೂಜಿ
ದೀಪಾವಳಿಯ ನಂತರ ಬರುವ ವಿಷೇಶ ಹಬ್ಬವೇ ತುಳಸಿ ಹಬ್ಬ. ಈ ಹಬ್ಬವನ್ನು ಕಾರ್ತೀಕ ಮಾಸದ ಶುಕ್ಲಪಕ್ಷದ ದ್ವಾದಶಿಯಂದು ಮತ್ತು ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಉತ್ಥಾನ ದ್ವಾದಶಿ ಅಂದ್ರೆ ತುಳಸಿ ಹಬ್ಬ.
ಕಾರ್ತಿಕ ಮಾಸದಲ್ಲಿ ಉತ್ಥಾನ ದ್ವಾದಶಿ ಅತ್ಯಂತ ಪವಿತ್ರವಾದ ದಿನ. ಉತ್ಥಾನ ಅಂದ್ರೆ ಏದ್ದೇಳು ಎಂದರ್ಥ. ಪುರಾಣಗಳ ಪ್ರಕಾರ, ಶ್ರೀಮನ್ನಾರಾಯಣ ಆಷಾಢ ಶುದ್ಧ ಶಯನ ಏಕಾದಶಿಯಂದು ಮಲಗಿ, ಕಾರ್ತಿಕ ಶುದ್ಧ ದ್ವಾದಶಿಯಂದು ಏಳುತ್ತಾನೆ. ವಿಷ್ಣು ತನ್ನ ಯೋಗನಿದ್ರೆಯಿಂದ ಎಚ್ಚರವಾಗುವ ದಿನವೇ ಉತ್ಥಾನ ದ್ವಾದಶಿ.
ವೈಕುಂಠದೊಡೆಯ ಶ್ರೀಮನ್ನಾರಾಯಣ ನಿದ್ರಾವಸ್ಥೆಯಿಂದ ಹೊರ ಬಂದು ತನ್ನ ಭಕ್ತರಿಗೆ ಈ ದಿನ ದರ್ಶನ ಕೊಡುತ್ತಾನೆ ಅನ್ನೋ ಪ್ರತೀತಿ ಇದೆ. ಹಾಲ್ಗಡಲಲ್ಲಿ ಮಲಗಿರೋ ಭಗವಂತನನ್ನು ಸುಪ್ರಭಾತ ಸೇವೆಯ ಮೂಲಕ ಎಬ್ಬಿಸಲಾಗುತ್ತದೆ. ಇದನ್ನ ಕ್ಷೀರಾಬ್ಧಿ ವ್ರತವೆಂದು ಕರೆಯಲಾಗುತ್ತೆ. ಈ ದಿನವನ್ನು ತುಳಸಿ ಹಬ್ಬವೆಂದು ಹೆಂಗೆಳೆಯರು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸ್ತಾರೆ.
ತುಳಸಿ ಪೂಜಾ ವಿಧಾನ:
ತುಳಸಿ ಮದುವೆಯ ಮಂಟಪ ಸೇರಿದಂತೆ ಮನೆಯನ್ನೆಲ್ಲ ಸಿಂಗರಿಸಬೇಕು. ತುಳಸಿ ಗಿಡದ ಜೊತೆಯಲ್ಲಿ ಬೆಟ್ಟದ ನೆಲ್ಲಿಯ ಗಿಡ ಮತ್ತು ಹುಣಸೆಯ ಗಿಡಗಳನ್ನು ಇಡಬೇಕು. ಮಹಾವಿಷ್ಣುವಿನ ಅವತಾರವಾದ ಶ್ರೀಕೃಷ್ಣನ ಮೂರ್ತಿಯನ್ನು ಸ್ಥಾಪಿಸಿ ವೈಭವದಿಂದ ಪೂಜೆ ಮಾಡಬೇಕು. ವಿಶೇಷವಾಗಿ ಪೂಜೆಯ ನೈವೇದ್ಯಕ್ಕಾಗಿ ಬೆಲ್ಲ ಹಾಕಿದ ಅವಲಕ್ಕಿಯನ್ನು ತಯಾರಿಸುತ್ತಾರೆ. ಇಂದಿನಿಂದ ಹಿಂದೂ ವಿವಾಹ ಕಾರ್ಯಗಳ ಆರಂಭವೂ ಆಗಿರುತ್ತದೆ.
● ಪೂಜೆಗೆ ಮುನ್ನ ಎಲ್ಲಾ ಮಂಗಳ ದ್ರವ್ಯಗಳನ್ನು ಜೋಡಿಸಿಟ್ಟುಕೊಳ್ಳಿ.
● ಮೊದಲು ವಿಘ್ನೇಶ್ವರನಿಗೆ ಪೂಜೆ ಸಲ್ಲಿಸಿ ನಂತರ ತುಳಸಿ ಪೂಜೆ ಮಾಡಿ.
● ಕುಟುಂಬ ಸದಸ್ಯರೆಲ್ಲಾ ಸೇರಿ ತುಳಸಿ ಪೂಜೆ ಮಾಡಿ.
● ಗೋಧೂಳಿ ಸಮಯದಲ್ಲಿ ತುಳಸಿ-ದಾಮೋದರರ ವಿವಾಹ ಮಾಡಿ.
● ತುಳಸಿ ಮತ್ತು ಕೃಷ್ಣನ ಆವಾಹನೆ ಮಾಡಿ.
● ತುಳಸಿಗೆ ಅಭಿಮುಖವಾಗಿ ಕೃಷ್ಣನ ವಿಗ್ರಹವನ್ನಿಡಿ.
● ತುಳಸಿ ಮಂಟಪದಲ್ಲಿ ಬೆಟ್ಟದ ನೆಲ್ಲಿಕಾಯಿ ಗಿಡವನ್ನಿಡಿ.
● ಮನೆಯವರೆಲ್ಲಾ ಸೇರಿ ಸಂಕಲ್ಪ ಮಾಡಿ ಪ್ರಾರ್ಥನೆ ಸಲ್ಲಿಸಿ.
● ತುಳಸಿಗೆ ಷೋಡಶೋಪಚಾರ ವಿಧಿಯ ಮೂಲಕ ಪೂಜೆ ಮಾಡಿ.
● ತುಳಸಿಗೆ ಮಾಂಗಲ್ಯಧಾರಣೆ ಮಾಡಿಸಿ.
● ಲಕ್ಷ್ಮೀಯನ್ನು ಮನದಲ್ಲಿ ಧ್ಯಾನಿಸಿ ತುಳಸಿ ಪೂಜೆ ಮಾಡಿ.
● ಬಾಳೆದಿಂಡಿನ ಮೇಲೆ ತುಪ್ಪದ ದೀಪ ಹಚ್ಚಿಡಿ.
● ತುಳಸಿಗೆ ಅವಲಕ್ಕಿ, ಬೆಲ್ಲದ ನೈವೇದ್ಯ ಅರ್ಪಿಸಿ.
● ಮುತ್ತೈದೆಯರೆಲ್ಲಾ ಸೇರಿ ತುಳಸಿಗೆ ಆರತಿ ಮಾಡಿ.
● ಮುತ್ತೈದೆಯರಿಗೆ ಅರಿಶಿನ-ಕುಂಕುಮ, ತಾಂಬೂಲ ಕೊಡಿ.
ತುಳಸಿ ವಿವಾಹ ಮಾಡುವುದರಿಂದ ದೊರೆಯುವ ಪ್ರಯೋಜನಗಳು
* ಮನೆಯಲ್ಲಿ ಮಕ್ಕಳ ಮದುವೆಗೆ ಇರುವ ಅಡೆತಡೆಗಳು ದೂರವಾಗುತ್ತದೆ.
* ಮನೆಗೆ ಐಶ್ಚರ್ಯ ಲಭಿಸುತ್ತದೆ.
* ಮನೆಯವರ ಶ್ರೇಯಸ್ಸಿಗಾಗಿ ಈ ಪೂಜೆ ಮಾಡಲಾಗುವುದು.
* ಮಕ್ಕಳ ಭಾಗ್ಯ ಲಭಿಸುವುದು.
* ಕನ್ಯಾದಾನ ಮಾಡುವ ಭಾಗ್ಯದೊರೆಯುವುದು.
ಕೆಲವು ಪ್ರಾಂತ್ಯಗಳಲ್ಲಿ ಈ ಆಚರಣೆಯು ಬೇರೆ ಬೇರೆ ವಿಧಾನವನ್ನು ಹೊಂದಿದ್ದರೂ, ಎಲ್ಲೆಡೆಯೂ ವಿಷ್ಣು ಮತ್ತು ತುಳಸಿಯ ವಿವಾಹವನ್ನು ಮಾಡಿ ಖುಷಿಪಡುತ್ತಾರೆ. ಇವೆಲ್ಲ ಏನೇ ಆದರೂ ಈ ತುಳಸಿಯ ಸಾಂಗತ್ಯವು ಮಾನವನ ಆರೋಗ್ಯ ವೃದ್ಧಿಯ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ. ಅದಕ್ಕಾಗಿಯೇ ಹಿರಿಯರು ತುಳಸಿಗೆ ಇಷ್ಟು ಮಹತ್ವದ ಸ್ಥಾನವನ್ನು ನೀಡಿದ್ದಾರೆ.
ಕಾರ್ತೀಕ ಮಾಸದಲ್ಲಿ ಪ್ರತಿದಿನ ತುಳಸಿಗೆ ಪೂಜೆ ಮಾಡಬೇಕು, ಸಂಧ್ಯಾ (ಸಾಯಂಕಾಲ) ಕಾಲದಲ್ಲಿ ದೀಪವನ್ನು ಬೆಳಗುವುದರಿಂದ ಒಂದು ಯುಗದಲ್ಲಿ ಮಾಡಿದ ಪಾಪಗಳೆಲ್ಲವೂ ಕಳೆಯುತ್ತವೆ. ವಿಶೇಷವಾಗಿ ಹಾಲಿನ ಅಭಿಷೇಕವನ್ನು ಮಾಡುವುದರಿಂದ ದೇವಾನು ದೇವತೆಗಳ ಆಶೀರ್ವಾದ ಲಭಿಸಿ ಇಷ್ಟಾರ್ತಗಳೆಲ್ಲವೂ ನೆರವೇರುವುತ್ತವೆ.
ನಾವು ಕೂಡಾ ಈ ತುಳಸಿ ವಿವಾಹ ಇದೆ 27ನೇ ದಿನಾಂಕದಂದು ಮಾಡಲಾಗುತ್ತದೆ ಆಸಕ್ತಿ ಇರುವವರು ಈ ಸೇವೆಯನ್ನು ಮಾಡಿಸಬಹುದು ತುಳಸಿ ಪೂಜೆ / ತುಳಸಿ ವಿವಾಹ ಸೇವೆ ₹351/- ಸೇವೆಯ Google Pay ಮುಖಾಂತರ ಮಾಡಬಹುದು.
*Google Pay # 7676762066 ಪೂಜೆಯ ಪ್ರಸಾದವನ್ನು Speed Post ಮುಖಾಂತರ ಕಳುಹಿಸಿ ಕೊಡಲಾಗುವುದು.