ಶರನ್ನವರಾತ್ರೋತ್ಸವ ಹಾಗೂ ಶ್ರೀ ರಾಮ ಮಂದಿರದ ಶತಮಾನೋತ್ಸವ ಸಮಾರಂಭ

ಬೆಂಗಳೂರು: ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ರಾಮ ಮಂದಿರದ 100ನೇ ವಾರ್ಷಿಕೋತ್ಸವ (1922-2022) ಸಮಾರಂಭ ಹಾಗೂ ಈ ವರ್ಷದ ಶರನ್ನವರಾತ್ರೋತ್ಸವವು ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5ರ ವರೆಗೆ ಏರ್ಪಡಿಸಿದ್ದು, ಅವುಗಳ ವಿವರಗಳು ಈ ರೀತಿ ಇವೆ :

ಸೆಪ್ಟೆಂಬರ್ 26, ಸಂಜೆ 5ಕ್ಕೆ ಉದ್ಘಾಟನೆ : ಶ್ರೀ ಯತಿರಾಜ ನಾರಾಯಣ ರಾಮಾನುಜ ಜೀಯರ್ ಹಾಗೂ ಹಾಗೂ ಬೇಲಿ ಮಠದ ಶ್ರೀ  ಶಿವರುದ್ರ ಮಹಾಸ್ವಾಮಿ ಅವರಿಂದ.
-------------------------------------------------
ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿದಿನ ಸಂಜೆ 6-30 ರಿಂದ 8-30
ಸೆಪ್ಟೆಂಬರ್ 26 : ಶ್ರೀ ಶ್ರೀಧರ್ ಸಾಗರ್ ಇವರಿಂದ "ಸ್ಯಾಕ್ಸೋಫೋನ್ ವಾದನ"  ಶ್ರೀ ಎಂ.ಡಿ. ಅರ್ಜುನ್ (ಪಿಟೀಲು), ಶ್ರೀ ಆರ್. ಗಣೇಶ್ (ಮೃದಂಗ).
ಸೆ. 27 : ಮೈಸೂರು ಶ್ರೀ ರಾಮಚಂದ್ರಾಚಾರ್ ಮತ್ತು ಸಂಗಡಿಗರಿಂದ "ದಾಸವಾಣಿ".
ಸೆ. 28 : ಶ್ರೀಮತಿ ವಿದ್ಯಾ ಕೃಷ್ಣಮೂರ್ತಿ ಮತ್ತು ತಂಡದವರಿಂದ "ದಾಸವಾಣಿ".
ಸೆ.29 : ಶ್ರೀಮತಿ ಸುಬ್ಬುಲಕ್ಷ್ಮಿ ಕೃಷ್ಣಮೂರ್ತಿ ಇವರಿಂದ "ಸಂಗೀತ" ಶ್ರೀಮತಿ ಸಿ. ಎನ್. ಉಷಾ (ಪಿಟೀಲು), ಶ್ರೀ ಹೆಚ್. ಎಸ್. ಕೃಷ್ಣಮೂರ್ತಿ (ಮೃದಂಗ).
ಸೆ.30 : ಸಿ. ಎನ್. ಧನಂಜಯ ಇವರಿಂದ "ವೀಣಾ ವಾದನ", ಶ್ರೀ ವಿ. ವೆಂಕಟಸುಬ್ಬು (ಮೃದಂಗ), ಶ್ರೀ ಆರ್. ಪಿ. ಶಂಕರ್ (ಘಟ).
ಅಕ್ಟೋಬರ್ 1 : ಮತ್ತಿಕೆರೆಯ ನೃತ್ಯ ಲಹರಿ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ "ಭರತನಾಟ್ಯ", ನಿರ್ದೇಶನ : ಶ್ರೀಮತಿ ರೂಪಾ ಗಿರೀಶ್.
ಅಕ್ಟೋಬರ್ 2 : ಶ್ರೀಮತಿ ರಂಜಿತಾ ಪ್ರಸಾದ್, ಶ್ರೀಮತಿ ಭಾವನಾ ಮೂರ್ತಿ ಇವರಿಂದ "ದಾಸರ ಪದಗಳ ಗಾಯನ" ಶ್ರೀ ಅಮಿತ್ ಶರ್ಮಾ (ಕೀ-ಬೋಡ್೯), ಶ್ರೀ ಶ್ರೀನಿವಾಸ ಕಾಖಂಡಕಿ (ತಬಲಾ).
ಅಕ್ಟೋಬರ್ 3 : ಶ್ರೀಮತಿ ರೂಪಾ ಪ್ರಭಂಜನ, ಶ್ರೀಮತಿ ರಮ್ಯಾ ಸುಧೀರ್ ಇವರಿಂದ "ಹರಿನಾಮ ಸಂಕೀರ್ತನೆ" ಶ್ರೀ ಅಮಿತ್ ಶರ್ಮಾ (ಕೀ-ಬೋಡ್೯), ಶ್ರೀ ಶ್ರೀನಿವಾಸ ಕಾಖಂಡಕಿ (ತಬಲಾ).
ಅಕ್ಟೋಬರ್ 4 : ಮಲ್ಲೇಶ್ವರದ ಶ್ರೀ ನಾಟ್ಯ ಭಾರತಿ ನೃತ್ಯ ಶಾಲೆಯ ಶ್ರೀ ನಾಗೇಶ್, ಶ್ರೀಮತಿ ಶ್ರೀರಂಜಿತಾ ನಾಗೇಶ್ ಮತ್ತು ಶಿಷ್ಯ ವೃಂದದವರಿಂದ "ಭರತನಾಟ್ಯ". 
ಅಕ್ಟೋಬರ್ 5 : ಬೆಳಗ್ಗೆ 10 ರಿಂದ 12 ಶ್ರೀ ರಾಮ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳು ನಂತರ ತೀರ್ಥ ಪ್ರಸಾದ ವಿನಿಯೋಗ. ಸಂಜೆ 6-30ಕ್ಕೆ ಶ್ರೀಮತಿ ಜ್ಯೋತಿ ಚೇತನ್ ಇವರಿಂದ "ವೀಣಾ ವಾದನ", ಶ್ರೀ ಎಸ್. ಭಾರ್ಗವ (ಮೃದಂಗ). ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ರಾಮನ ಹಾಗೂ ಶ್ರೀ ರಾಜರಾಜೇಶ್ವರಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ಪದಾಧಿಕಾರಿಗಳು ವಿನಂತಿಸಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles