ಜ. 31ರಿಂದ ಫೆ. 24ರವರೆಗೆ – ಮಾತೆಯರಿಗಾಗಿ ಗುರುಗುಹ ಸಂಗೀತ ಮಹಾವಿದ್ಯಾಲಯ ಆಯೋಜನೆ
ಬೆಂಗಳೂರು: ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ಖ್ಯಾತ ವಿದ್ವಾನ್ ಶೃಂಗೇರಿ ಎಚ್. ಎಸ್. ನಾಗರಾಜ್ ನೇತೃತ್ವದಲ್ಲಿ ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯ ಬೆಂಗಳೂರಿನ 8 ಕೇಂದ್ರಗಳಲ್ಲಿ ದೇವರನಾಮ ಕಲಿಕಾ ಉಚಿತ ತರಬೇತಿ ಶಿಬಿರ ಹಮ್ಮಿಕೊಂಡಿದೆ.
ಶ್ರೀಪುರಂದರ ದಾಸರ, ಶ್ರೀ ತ್ಯಾಗರಾಜರ ಆರಾಧನಾ ಉತ್ಸವದ ಅಂಗವಾಗಿ ಜ. 31ರಿಂದ ಫೆ. 24ರವರೆಗೆ ಶಿಬಿರ ನಡೆಯಿದೆ. ಪದ್ಮನಾಭನಗರದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯ, ಯಲಹಂಕ ನ್ಯೂ ಟೌನ್ನ ಶ್ರೀ ಮಹಾಗಣಪತಿ ದೇವಾಲಯ, ಕೆಂಗೇರಿ ಉಪನಗರದ ಶ್ರೀಪುಣ್ಯ ನಿಲಯ, ಕೆಂಗೇರಿಯ ಡಿ.ಎಸ್. ಮ್ಯಾಕ್ಸ್ ಅಪಾರ್ಟ್ಮೆಂಟ್, ದೊಡ್ಡಕಲ್ಲಸಂದ್ರದ ನಾರಾಯಣನಗರ ನಿವಾಸಿಗಳ ಸಂಘ, ರಾಜರಾಜೇಶ್ವರಿನಗರದ ಗಾಯತ್ರೀ ಶ್ರೀಕನಕಧಾರಾ ಲಕ್ಷ್ಮೀ ದೇವಾಲಯ, ಪೂರ್ಣಪ್ರಜ್ಞ ಬಡಾವಣೆಯ ಶ್ರೀಆಂಜನೇಯಸ್ವಾಮಿ ದೇವಾಲಯ, ಹೊಸಕೆರೆಹಳ್ಳಿಯ ಬಸವಣ್ಣ ದೇವಸ್ಥಾನದಲ್ಲಿ ಶಿಬಿರ ಆಯೋಜನೆಗೊಂಡಿದೆ. ಗಾಯನ ಆಸಕ್ತಿ ಇರುವ ಯಾವುದೇ ವಯೋಮಾನದ ಮಹಿಳೆಯರು ಭಾಗವಹಿಸಬಹುದು.
ಫೆ. 26ರಂದು ಬೆಂಗಳೂರಿನ ಶ್ರೀ ನಿವಾಸಪುರದ ಓಂಕಾರ ಆಶ್ರಮದ ಸಭಾಂಗಣದಲ್ಲಿ ಶ್ರೀ ಪುರಂದರ ದಾಸರ, ಶ್ರೀ ತ್ಯಾಗರಾಜರ ಆರಾಧನಾ ಉತ್ಸವ ನಡೆಯಲಿದೆ. ಸಾವಿರಕ್ಕೂ ಹೆಚ್ಚು ಮಾತೆಯರು ಸಂಗಮಿಸಿ ಏಕ ಕಂಠದಲ್ಲಿ ದಾಸರಪದಗಳನ್ನು ಹಾಡಲಿದ್ದಾರೆ.
ಹೆಸರು ನೋಂದಣಿ ಮತ್ತು ವಿವರಗಳಿಗೆ 95910 45725 ಅಥವಾ 98803 39733 ಸಂಪರ್ಕಿಸಬಹುದು.