ಕುಕ್ಕೆ ಸುಬ್ರಹ್ಮಣ್ಯ: ನಾಗಾರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ.
ಕೊರೋನಾ ಕಾರಣದಿಂದ ಸರಕಾರದ ನಿಯಂಗಳನ್ನು ಪಾಲಿಸಿಕೊಂಡು ಪೂರ್ವಶಿಷ್ಠ ಸಂಪ್ರದಾಯ0ತೆ ಜಾತ್ರಾಮಹೋತ್ಸವ ನೆರವೇರಿಸಲಾಗುತ್ತದೆ, ಭಕ್ತರು ಸಹಕರಿಸಬೇಕು ಎಂದು ದೇಗುಲದ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕ ಎಸ್. ಅಂಗಾರ ತಿಳಿಸಿದ್ದಾರೆ.
ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಾಸಕ ಅಂಗಾರ ಅವರು, ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಈ ಬಾರಿ ಬೀದಿ ಮಡಸ್ನಾನಕ್ಕೆ ಮಾತ್ರ ಅವಕಾಶವಿರಲಿದೆ. ಆದರೆ ದೇವಸ್ಥಾನದ ಒಳಗೆ ನಡೆಯುತ್ತಿದ್ದ ಎಡೆಸ್ನಾನಕ್ಕೆ ಅವಕಾಶವಿಲ್ಲ. ಈ ಹಿಂದೆ ನಿರ್ಣಯಿಸಿದಂತೆ ಬ್ರಹ್ಮರಥ ಸೇವೆಗೂ ಅವಕಾಶವಿಲ್ಲ ಎಂದರು.
ಡಿಸೆಂಬರ್ 12ರಿಂದ ಕುಕ್ಕೆ ಜಾತ್ರೆ ಆರಂಭ, 20ರಂದು ಚಂಪಾಷಷ್ಠಿ ಮಹಾರಥೋತ್ಸವ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿಸೆಂಬರ್ 12ರಿಂದ 26ರವರೆಗೆ ಜಾತ್ರೆ ನಡೆಯಲಿದೆ. ಕೇಂದ್ರ ಹಾಗೂ ರಾಜ್ಯಸರ್ಕಾರದ ಕೊರೊನಾ ನಿಯಂತ್ರಣ ನಿಯಮಗಳಿಗೆ ಅನುಗುಣವಾಗಿ ಜಾತ್ರೆ ನೆರವೇರಲಿದೆ.
ಡಿಸೆಂಬರ್ 20ರಂದು ಬೆಳಗ್ಗೆ ಚಂಪಾಷಷ್ಠಿ ಮಹಾ ರಥೋತ್ಸವ ನಡೆಯಲಿದೆ.
ಡಿ.11ರಂದು ಮೂಲ ಮೃತ್ತಿಕಾ ಪ್ರಸಾದ ತೆಗೆಯಲಾಗುವುದು. ಡಿ.12ರಂದು ಕೊಪ್ಪರಿಗೆ ಏರುವುದರ ಮೂಲಕ ಜಾತ್ರೆ ಆರಂಭವಾಗಲಿದೆ. ಆ ದಿನ ರಾತ್ರಿ ಶೇಷ ವಾಹನಯುಕ್ತ ಬಂಡಿ ಉತ್ಸವ ನಡೆಯಲಿದೆ.
13ರಂದು ಶೇಷವಾಹನಯುಕ್ತ ಬಂಡಿ ಉತ್ಸವ, 14ರಂದು ಲಕ್ಷದೀಪೋತ್ಸವ, ೧೫ರಂದು ಶೇಷವಾಹನೋತ್ಸವ, 16ರಂದು ಅಶ್ವವಾಹನೋತ್ಸವ, 17ರಂದು ಮಯೂರ ವಾಹನೋತ್ಸವ, 18ರಂದು ಚೌತಿ ಹೂವಿನ ತೇರು, 19ರಂದು ಮಾರ್ಗಶಿರ ಶುದ್ಧ ಪಂಚಮಿ ದಿನ ತೈಲಾಭ್ಯಂಜನ, ರಾತ್ರಿ ಪಂಚಮಿ ರಥೋತ್ಸವ, 20ರಂದು ಷಷ್ಠಿ ದಿನ ಬೆಳಗ್ಗೆ ಮಹಾರಥೋತ್ಸವ ನಡೆಯಲಿದೆ. 21ರಂದು ಅವಭೃತೋತ್ಸವ ಮತ್ತು ನೌಕಾವಿಹಾರ, ಡಿ.26ರಂದು ಕೊಪ್ಪರಿಗೆ ಇಳಿಯುವುದರ ಮೂಲಕ ಜಾತ್ರೆ ಸಮಾಪನಗೊಳ್ಳಲಿದೆ.
ಚಿತ್ರ: ಲೋಕೇಶ್ ಬಿ.ಎನ್, ಕುಕ್ಕೆಸುಬ್ರಹ್ಮಣ್ಯ