ಶರಣಬಸವೇಶ್ವರ ಜಾತ್ರೆ


ಹನುಮಸಾಗರ: ಸಮೀಪದ ಹಾಬಲಕಟ್ಟಿ ಗ್ರಾಮದಲ್ಲಿಶ್ರೀ ಶರಣಬಸವೇಶ್ವರ ಜಾತ್ರೆ ನಿಮಿತ್ತ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮಾ. 6ರಂದು ಉಡಿ ತುಂಬುವ ಕಾರ್ಯಕ್ರಮ, 7ರಂದು ಶರಣಬಸವೇಶ್ವರ ದೇವರಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ. ಸಾಮೂಹಿಕ ಮದುವೆ, ಅನ್ನ ಸಂತರ್ಪಣೆ, ಅಭಿನವ ಕರಿಬಸವ ಸ್ವಾಮೀಜಿಯಿಂದ ಪ್ರವಚನ, ಹಾರಿಕ ಮಂಜುನಾಥ ಅವರಿಂದ ಉಪನ್ಯಾಸ. 8ರಂದು ಶರಣಬಸವೇಶ್ವರ ಭಾವಚಿತ್ರ ಹಾಗೂ 108 ಕುಂಭಗಳ ಮೆರವಣಿಗೆ, ರಥೋತ್ಸವ, ದೀಪೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles