ಬೆಂಗಳೂರು: ಕಾರ್ತಿಕ ಮಾಸದ ಕೊನೆಯ ಸೋಮವಾರದ ಅಂಗವಾಗಿ “ಲಕ್ಷ ದೀಪೋತ್ಸವ”ದ ಕಾರ್ಯಕ್ರಮವು ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ.ವಾಧೀಂದ್ರ ಆಚಾರ್ಯರ ನೇತೃತ್ವದಲ್ಲಿ ಭಕ್ತರ ಸಹಕಾರದೊಂದಿಗೆ ವಿಶೇಷವಾಗಿ ನೂತನವಾದ ಹಿತ್ತಾಳಿ ಸಾಲುದೀಪಗಳ ವಿಶೇಷ ಅಲಂಕಾರದೊಂದಿಗೆ ಇಂದು ಡಿಸೆಂಬರ್ 14ರಂದು ಸಂಜೆ 7ಕ್ಕೆ ನೆರವೇರಿತು.
ಈ ಸಮಯದಲ್ಲಿ ಕೋವಿಡ್ ಎಲ್ಲಾ ನಿಯಮಗಳಾದ ಥರ್ಮಲ್ ಸ್ಕ್ಯಾನಿಂಗ್ ಸ್ಯಾನಿಟೈಸರ್ ಸಾಮಾಜಿಕ ಅಂತರ ಹಾಗೂ ಮುಖ ಮಾಸ್ಕನ್ನು ಒಳಗೊಂಡ ನಿಯಮಗಳನ್ನು ಪಾಲಿಸಿ ಶ್ರೀ ಗುರುರಾಯರ “ಲಕ್ಷ ದೀಪೋತ್ಸವದ” ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿ ಶ್ರೀರಾಘವೇಂದ್ರ ಸ್ವಾಮಿಗಳವರ ಅನುಗ್ರಹಕ್ಕೆ ಪಾತ್ರರಾದರು.
ಈ ಸಂದರ್ಭದಲ್ಲಿ ಭಕ್ತಾದಿಗಳು ಶ್ರೀಮಠದ ಆಡಳಿತದ ವ್ಯವಸ್ಥೆಯನ್ನು ಕಂಡು ಸಂತೋಷವನ್ನು ವ್ಯಕ್ತಪಡಿಸಿ ಬೆಂಗಳೂರಿಗೆ ಶ್ರೀಮಠವು “ರೋಲ್ ಮಾಡೆಲ್” ಇದ್ದಹಾಗೆ ಎಂದು ತಿಳಿಸಿದರು.
ಇನ್ನು ಮುಂದಿನ ದಿನಗಳಲ್ಲಿ ಭಕ್ತಾದಿಗಳ ಅಪೇಕ್ಷೆಯ ಮೇರೆಗೆ ಪ್ರತಿ ಗುರುವಾರ ಸಂಜೆ 7 ಕ್ಕೆ ಸಾಮೂಹಿಕ ದೀಪೋತ್ಸವವು ನೆರವೇರಲಿದೆ ಎಂದು ಶ್ರೀಮಠದ ವ್ಯವಸ್ಥಾಪಕರಾದ ಆರ್.ಕೆ.ವಾಧೀಂದ್ರ ಆಚಾರ್ಯರು ತಿಳಿಸಿದರು.
ಧನುರ್ಮಾಸ ಪೂಜೆ
16-12-2020 ರಿಂದ 13-01-2021ವರಗೆ ಪ್ರಾತಃ ಕಾಲದ ಧನುರ್ಮಾಸದ ಪೂಜೆಯು ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ “ಹುಗ್ಗಿ ಪೊಂಗಲ್”ಇತ್ಯಾದಿ ಸೇವೆಗಳು ಪ್ರಾತಃಕಾಲದಲ್ಲಿ ನೆರವೇರಲಿದೆ. ಸೇವೆಗಳನ್ನು ಸಲ್ಲಿಸುವವರು ಹೆಚ್ಚಿನ ಮಾಹಿತಿಗಾಗಿ ಶ್ರೀಮಠದ ಆಡಳಿತ ಮಂಡಳಿಯನ್ನು ಸಂಪರ್ಕಿಸಬಹುದು ಎಂದು ಕಿಶೋರ್ ಆಚಾರ್ಯರು ತಿಳಿಸಿದ್ದಾರೆ.
ಮಾಹಿತಿಗೆ: 9945429129-9449133929-8660349906-08022443962.
(ವರದಿ: ದೇಸಾಯಿ ಸುಧೀಂದ್ರ)