ಬೆಂಗಳೂರು: ಉಡುಪಿ ಪೇಜಾವರ ಅಧೋಕ್ಷಜ ಮಠದ 34ನೇ ಯತಿಗಳಾಗಿದ್ದ ವಿಶ್ವೇಶತೀರ್ಥ ಶ್ರೀಗಳ ಪ್ರಥಮ ಮಹಾಸಮಾರಾಧನಾ ಮಹೋತ್ಸವ, ಅವರ ಮೂಲ ಬೃಂದಾವನವಿರುವ ನಗರದ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಆರಂಭವಾಗಿದೆ.
ಡಿಸೆಂಬರ್ 16,17,18ರಂದು ಪೂರ್ವಾರಾಧನೆ, ಮಧ್ಯಾರಾಧನೆ, ಉತ್ತರಾರಾಧನೆ ನಡೆಯಲಿದೆ. ಉತ್ತರಾರಾಧನೆ ಕಾರ್ಯಕ್ರಮದಲ್ಲಿ ಕಾಣಿಯೂರು, ಭೀಮನಕಟ್ಟೆ ಮತ್ತು ಚಿತ್ತಾಪುರ ಮಠದ ಶ್ರೀಗಳು ಪಾಲ್ಗೊಳ್ಳಲಿದ್ದಾರೆ.
17ರಂದು ಬೆಳಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ಶ್ರೀ ಪಾದರು, ಶ್ರೀ ಸೋದೆ ವಾದಿರಾಜ ಮಠದಶ್ರೀ ವಿಶ್ವವಲ್ಲಭ ಶ್ರೀಪಾದರು, ಪರ್ಯಾಯ ಶ್ರೀ ಅದಮಾರು ಮಠದ ಈಶಪ್ರಿಯ ತೀರ್ಥ ಶ್ರೀಪಾದರು, ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥರು ಸಂದೇಶ ನೀಡಲಿದ್ದಾರೆ.
ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಕುರಿತು ಸಗ್ರಿ ರಾಘವೇಂದ್ರ ಉಪಾಧ್ಯಾಯ ಸಂಗ್ರಹಿಸಿದ ಲೇಖನಗಳ ಕುರಿತಾದ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ಸಂಜೆ 4.30ಕ್ಕೆ ವಿಶೇಷ ಸಂಸ್ಮರಣೆ
ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು.
ಸಂದೇಶ: ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಶ್ರೀಕೃಷ್ಣಾಪುರ ಮಠ, ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಪರ್ಯಾಯ ಶ್ರೀ ಅದಮಾರು ಮಠ, ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಪರ್ಯಾಯ ಶ್ರೀ ಅದಮಾರು ಮಠ
ಸಂಸ್ಮರಣೆ: ವಿದ್ವಾನ್ ಎಂ.ಎಲ್.ಸಾಮಗ, ವಿ. ಸಗ್ರಿ ಆನಂದ ತೀರ್ಥ
ಶ್ರೀಪಾದರ ಆರಾಧನಾ ಮಹೋತ್ಸವ ಡಿಸೆಂಬರ್ 18 ವರೆಗೆ ನಡೆಯಲಿದೆ. “ಆರಾಧನಾ ಪ್ರಯುಕ್ತದ ಎಲ್ಲಾ ಕಾರ್ಯಕ್ರಮಗಳು ಆನ್ಲೈನ್ /ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದೆ” ಎಂದು ಪೂರ್ಣಪ್ರಜ್ಞ ವಿದ್ಯಾಪೀಠದ ಗೌರವ ಕಾರ್ಯದರ್ಶಿಗಳಾದ ವಿದ್ವಾನ್ ಕೇಶವಾಚಾರ್ಯ ಹೇಳಿದ್ದಾರೆ.
ಸರಕಾರದ ಆದೇಶದನ್ವಯ ಕೋವಿಡ್ – 19 ಪ್ರಯುಕ್ತ ಸಾರ್ವಜನಿಕ ಕಾರ್ಯಕ್ರಮವಿರುವುದಿಲ್ಲ. ಭಕ್ತರು ಸಾರ್ವಜನಿಕವಾಗಿ ಸೇರದೇ, ಮನೆಯಲ್ಲೇ ಕೂತು ಈ ಕಾರ್ಯಕ್ರಮಗಳನ್ನು ವೀಕ್ಷಿಸಬೇಕಾಗಿ ಪೇಜಾವರ ಮಠ ವಿನಂತಿಸಿಕೊಂಡಿದೆ.
ಆರಾಧನೆಯ ಎಲ್ಲಾ ಕಾರ್ಯಕ್ರಮಗಳು ಮಠದ ಈಗಿನ ಪೀಠಾಧಿಪತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥರ ನೇತೃತ್ವದಲ್ಲಿ ನಡೆಯಲಿದ್ದು, ಡಿಸೆಂಬರ್ ಹದಿನೆಂಟರ ವರೆಗೆ ವಿವಿಧ ಇತಿಹಾಸ ಗೋಷ್ಠಿ, ಪ್ರವಚನ ಕಾರ್ಯಕ್ರಮಗಳು ನಡೆಯಲಿವೆ.
ಪೇಜಾವರ ಲೇಖನ ಬಹಳ ಅಂದವಾಗಿದೆ ಮಾಹಿತಿಯೊಂದಿಗೆ
thank you