ಸಾಲಿಗ್ರಾಮ: ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ 14 ರಂದು ಕಾರ್ತಿಕ ಸೋಮವಾರ ಅಮಾವಾಸ್ಯೆಯಂದು ಸಂಜೆ 7ರಿಂದ ಶ್ರೀ ದೇವರ ವಾರ್ಷಿಕ ದೀಪೋತ್ಸವ, ಬೆಳಗ್ಗೆ ಪಂಚವಿಂಶತಿ ಕಲಶಾಭಿಷೇಕ, ಚತುರ್ವೇದ ಪಾರಾಯಣ ಸಂಜೆ ಹಿರೇರಂಗಪೂಜೆ, ಉತ್ಸವ ಬಲಿ, ಪುಷ್ಪರಥೋತ್ಸವ, ತೆಪ್ಪೋತ್ಸವ ನಡೆಯಿತು.
ಡಿ.17 ರಿಂದ 24 ರವರೆಗೆ ಶ್ರೀ ದೇವಳದಲ್ಲಿ ಲೋಕಕಲ್ಯಾಣಾರ್ಥವಾಗಿ ಶಾಕಲ ಋಕ್ಸಂಹಿತಾ ಯಾಗ ನಡೆಯಲಿದೆ ಎಂದು ದೇಗುಲದ ಪ್ರಕಟಣೆ ತಿಳಿಸಿದೆ.
ಸೂಚನೆ: ಭಕ್ತರು ಮಾಸ್ಕ್ ಧರಿಸುವುದು ಕಡ್ಡಾಯ. ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ ನಿಯಂತ್ರಣಕ್ಕೆ ಸರಕಾರ ಸೂಚಿಸಿರುವ ನಿಯಮಗಳನ್ನು ಪಾಲಿಸುವುದು ಕಡ್ಡಾಯ.






























