ಬೆಂಗಳೂರು: ಸುಮಾರು 40 ವರ್ಷಗಳಿಂದ ಜಯನಗರ 5ನೇ ಬ್ಲಾಕ್ನಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀರಾಯರ ಸೇವೆಯನ್ನು ಸಲ್ಲಿಸಿದ್ದ ಜೆ. ನರಸಿಂಹಮೂರ್ತಾಚಾರ್ ಡಿ.19ರಂದು ದೈವಾಧೀನರಾದರು.
ಜೆ. ನರಸಿಂಹಮೂರ್ತಾಚಾರ್ ಆಧುನಿಕ ದಾಸ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಅವರು 3 ಸಾವಿರಕ್ಕೂ ಮಿಗಿಲಾಗಿ ರಾಯರ ಹಾಡುಗಳನ್ನು ರಚಿಸಿ ಐದಾರು ನಾಟಕಗಳಿಗೆ ನಿರ್ದೇಶನ ಮಾಡಿದ್ದಾರೆ.
ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಕೊಡಲಿ ಎಂದು ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಶ್ರೀ ಹರಿ ವಾಯುಗುರುಗಳಲ್ಲಿ ಪ್ರಾರ್ಥಿಸಿದರು ಎಂದು ಶ್ರೀಮಠದ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರ ಆಚಾರ್ಯರು ತಿಳಿಸಿದ್ದಾರೆ.