*ರೂಪಾಪ್ರಸಾದ ಕೋಡಿಂಬಳ ಕುಕ್ಕೆಯಲ್ಲಿ ನೆಲೆಸಿಹ ಸುಬ್ರಹ್ಮಣ್ಯನೇ ಭಕ್ತರನ್ನು ಪೊರೆಯೊ ನೀ ಮಹಾಮಹಿಮನೇ ವರವ ನೀಡಿ ಪಾಲಿಸೆಯ ಕರುಣಾಕರನೇ ಹರನಸುತ ಪೊರೆಯೊ ಎನ್ನ ಗಿರಿಜೆಲೋಲನೇ|| ಹಾಲನೆರೆದು ಪೂಜಿಸುವೆ ಭಕ್ತಿಯಿಂದಲಿ ಹಾವು ಎನದೆ ದೇವನೆನುವೆ ಸತ್ಯದಿಂದಲಿ ಆಶ್ಲೇಷ ಪೂಜೆಗೈದು ಶರಣು ಎನ್ನುವೆ ದೋಷಗಳ ಪರಿಹರಿಸು ಎಂದು ಬೇಡುವೆ || ಕುಮಾರಧಾರೆ ನದಿಯಲ್ಲಿ ಮಿಂದು ಬರುವೆನು ಕುಮಾರನೀನು ಒಲಿದುಬಂದು ಹರಸು ಎನ್ನನು ಮಡೆಯ ಸ್ನಾನವನ್ನು ಮಾಡಿ ನಿನ್ನ ನಮಿಸುವೆ ಉರುಳುಸೇವೆಯನ್ನು ಗೈದು ಸ್ಕಂದ ಭಜಿಸುವೆ|| ಚರ್ಮರೋಗಗಳನು ನೀನು ದೂರಮಾಡೆಯಾ ಮರ್ಮವನ್ನು ಅರಿತೆಮಗೆ ಅಭಯ ನೀಡೆಯಾ ಭವದ ಕಷ್ಟಗಳನು ಕಳೆಯೊ ಕಾರ್ತಿಕೇಯನೇ ಭಯದ ಮನದ ಇಷ್ಟವರಿತು ಪೊರೆಯೊ ಸ್ಕಂದನೇ||