ಆಟಿಕೆ ವಿಮಾನದ ಹರಕೆಗೆ ಒಲಿವ ದೇವನೀತ

ವೀಸಾ ಪಡೆಯಲು ವಿಳಂಬ, ಅಡ್ಡಿ ಎದುರಾದಾಗ ಅಲ್ಲಿ ಹೋಗಿ ಆಟಿಕೆ ವಿಮಾನವನ್ನು ಅರ್ಪಿಸಿದರೆ ಯಾವುದೇ ಅಡೆತಡೆಯಿಲ್ಲದೆ ವೀಸಾ ದೊರಕುತ್ತದೆ ಎಂಬುದು ಭಕ್ತರ ನಂಬಿಕೆ. ಹಾಗಾಗಿ ನೂರಾರು ಭಕ್ತರು ದೇವಸ್ಥಾನಕ್ಕೆ ಬಂದು ಆಟಿಕೆ ವಿಮಾನವನ್ನು ಅರ್ಪಿಸಿ ಪೂಜಿಸುತ್ತಾರೆ.

ದೇವಸ್ಥಾನದ ಆಸುಪಾಸಿನಲ್ಲಿ ಸಾಮಾನ್ಯವಾಗಿ ಹೂವು, ಹಣ್ಣು, ಕರ್ಪೂರ, ಅಗರಬತ್ತಿ ಇವೇ ಮೊದಲಾದ ಪೂಜಾ ಸಾಮಾಗ್ರಿಗಳನ್ನು ಮಾರಾಟ ಮಾಡುವಂತಹ ಅಂಗಡಿಗಳಿದ್ದರೆ ಇಲ್ಲಿ ಮಾತ್ರ ಆಟಿಕೆ ವಿಮಾನ ಮಾರುವ ಅಂಗಡಿಗಳಿದ್ದು, ಭಕ್ತರ ಪೂಜಾ ಸಾಮಾಗ್ರಿಯನ್ನ್ನು ಪೂರೈಸುತ್ತಿದೆ.

ಏರೋಪ್ಲೇನ್ ದೇವಸ್ಥಾನ ಪಂಜಾಬ್‌ನ ಜಲಾಂಧರ್‌ನಿಂದ 12ಕಿ.ಮೀ.ದೂರದಲ್ಲಿದೆ. ಸುಮಾರು 150ವರ್ಷಗಳ ಇತಿಹಾಸವನ್ನು ಹೊಂದಿರುವ ಸಿಖ್ ದೇವಾಯಲವಿದು. ಪಂಜಾಬ್‌ನ ಸಂತ ಬಾಬಾ ನಿಹಾಲ್ ಗುರುದ್ವಾರ ದೇವಸ್ಥಾನಕ್ಕೆ ನೂರಾರು ಭಕ್ತರು ಪ್ರತಿದಿನ ಭೇಟಿ ನೀಡುತ್ತಾರೆ. ಈ ದೇವಸ್ಥಾನದಲ್ಲಿ ವಿಲಕ್ಷಣ ನಂಬಿಕೆಯೊಂದಿದೆ. ವೀಸಾ ಸಿಗದೇ ಇರುವವರು ಇಲ್ಲಿ ಬಾಬಾನ ಮೊರೆಹೋಗುತ್ತಾರೆ. ಮಕ್ಕಳ ಆಟಿಕೆಯಂತೆ ಕಾಣುವ ಪ್ಲಾಸ್ಟಿಕ್ ವಿಮಾನವನ್ನು ಈ ದೇವಸ್ಥಾನದಲ್ಲಿ ಕಾಣಿಕೆಯಾಗಿ ನೀಡುವುದರ ಮೂಲಕ ಭಕ್ತರು ತಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳುತ್ತಾರೆ. ವಿದೇಶಗಳಿಗೆ ಹಾರಿ ಅಲ್ಲಿಯೇ ನೆಲೆಕಂಡುಕೊಳ್ಳಲು ಬಯಸುವವರು ವೀಸಾ ಸಿಗದೆ ಹೋದಾಗ, ನಿರಾಸೆ ಉಂಟಾಗಿದ್ದರೆ ಈ ದೇವಸ್ಥಾನಕ್ಕೆ ಭೇಟಿ ನೀಡಿ ಆಟಿಕೆ ವಿಮಾನವನ್ನು ಕಾಣಿಕೆಯಾಗಿ ನೀಡಿ ವೀಸಾ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

ವೀಸಾ ಪಡೆಯಲು ವಿಳಂಬ, ಅಡ್ಡಿ ಎದುರಾದಾಗ ಅಲ್ಲಿ ಹೋಗಿ ಆಟಿಕೆ ವಿಮಾನವನ್ನು ಅರ್ಪಿಸಿದರೆ ಯಾವುದೇ ಅಡೆತಡೆಯಿಲ್ಲದೆ ವೀಸಾ ದೊರಕುತ್ತದೆ ಎಂಬುದು ಭಕ್ತರ ನಂಬಿಕೆ. ಹಾಗಾಗಿ ನೂರಾರು ಭಕ್ತರು ದೇವಸ್ಥಾನಕ್ಕೆ ಬಂದು ಆಟಿಕೆ ವಿಮಾನವನ್ನು ಅರ್ಪಿಸಿ ಪೂಜಿಸುತ್ತಾರೆ.
ಇಂತಹ ವಿಲಕ್ಷಣ ಆಚರಣೆಯ ದೇವಸ್ಥಾನ ಇರುವುದು ಪಂಜಾಬ್‌ನ ಡೊವಾಬಾದಲ್ಲಿ. ಈ ದೇವಸ್ಥಾನವನ್ನು ಸ್ಥಳೀಯರು ಹವಾಯ್‌ಜಹಾಝ್, ಏರೋಪ್ಲೇನ್ ಟೆಂಪಲ್ ಎಂದೇ ಕರೆಯುತ್ತಾರೆ. ವಿದೇಶಗಳಲ್ಲಿ ಅದರಲ್ಲೂ ಪ್ರಮುಖವಾಗಿ ಲಂಡನ್, ನ್ಯೂಯಾರ್ಕ್ ಅಥವಾ ಟೊರಾಂಟೋದಲ್ಲಿಯಲ್ಲಿಯೇ ಸೆಟಲ್ ಆಗಲು ನಿರ್ಧರಿಸಿದವರು ಹೆಚ್ಚಾಗಿ ಇಲ್ಲಿಗೆ ಬರುತ್ತಾರೆ.

ವಿವಿಧ ಮಾದರಿಯ, ಆಕಾರದ, ವಿವಿಧ ಬಣ್ಣದ ಆಟಿಕೆ ಏರೋಪ್ಲೇನ್‌ಗಳು ಇಲ್ಲಿ ಮಾರಾಟಕ್ಕಿವೆ.
ಆಟಿಕೆ ವಿಮಾನವನ್ನು ಖರೀದಿಸಿದ ಭಕ್ತರು ಅದನ್ನು ದೇವಸ್ಥಾನದ ಮುಂದೆ ತಂದಿಡುತ್ತಾರೆ. ಸಿಖ್ ಸಂಪ್ರದಾಯದಂತೆ ಪೂಜೆ ಸಲ್ಲಿಸುತ್ತಾರೆ. ಆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಭಕ್ತರ ಬೇಡಿಕೆಯೂ ಈಡೇರಿದೆಯಂತೆ.

ಆದರೆ ಈ ದೇವಸ್ಥಾನದಲ್ಲಿ ಈ ರೀತಿಯ ಆಚರಣೆ ಹೇಗೆ ಬಂತು ಎಂಬುದು ಯಾರಿಗೂ ಗೊತ್ತಿಲ್ಲ. ಪ್ರತಿ ಭಾನುವಾರ 80-100 ಆಟಿಕೆ ವಿಮಾನಗಳು ಕಾಣಿಕೆ ರೂಪದಲ್ಲಿ ಅರ್ಪಣೆಗೊಳ್ಳುತ್ತದೆ. ದೇವಸ್ಥಾನದಲ್ಲಿ ಕಾಣಿಕೆಯಾಗಿ ಬಂದ ಆಟಿಕೆ ವಿಮಾನಗಳನ್ನು ಪವಿತ್ರ ವಸ್ತು ಎಂದೇ ಭಾವಿಸಲಾಗುತ್ತದೆ ಹಾಗೂ ಅವುಗಳನ್ನು ಹತ್ತಿರದ ಗ್ರಾಮಗಳ ಬಡಮಕ್ಕಳಿಗೆ ಹಂಚುತ್ತಾರಂತೆ.
ಆಚರಣೆ ಏನೇ ಇರಲಿ ವಿದೇಶದಲ್ಲಿ ನೆಲೆಸಲು ವೀಸಾ ದೊರೆಯದೇ ಇರುವ ನಾಗರೀಕರಿಗೆ ದಾರಿ ಮಾಡಿಕೊಡುತ್ತಿರುವ ಈ ಆಚರಣೆಯನ್ನು ಅಲ್ಲಿನ ಜನರಂತೂ ಭಕ್ತಿ-ಭಾವದಿಂದ ನಂಬುತ್ತಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles