ಬೆಂಗಳೂರು: ವೈಕುಂಠ ಏಕಾದಶಿ ಪ್ರಯುಕ್ತ ಮಲ್ಲೇಶ್ವರಂ ನಲ್ಲಿರುವ ಉಡುಪಿ ಪಲಿಮಾರು ಮಠದಲ್ಲಿ ಇಂದು ಡಿ.25ರ ಸಂಜೆ ಕು. ರಚನಾ ಶರ್ಮಾ ‘ದಾಸ ನಮನ’ ಕಾರ್ಯಕ್ರಮ ನಡೆಸಿಕೊಟ್ಟರು.
ಶ್ರೀ ವೆಂಕಟವಿಠಲದಾಸರ “ಜಯ ಜಯ ವಿಘ್ನೇಶ” ಎಂಬ ಕೃತಿಯೊಂದಿಗೆ ಆರಂಭಿಸಿ, ಶ್ರೀ ಗೋಪಾಲದಾಸರ “ಗುರುರಾಘವೇಂದ್ರ ಚರಣ”, ಶ್ರೀ ವಾದಿರಾಜರ “ಎಣೆ ಯಾರೋ ಹನುಮಂತರಾಯ”, ಶ್ರೀ ಕನಕದಾಸರ “ದಾಸನಾಗಬೇಕು ಸದಾಶಿವನ”, ಶ್ರೀ ಮಹಿಪತಿದಾಸರ “ನೀನೇ ಪರಮ ಪಾವನಿ”, ಶ್ರೀ ಬನ್ನಂಜೆ ಗೋವಿಂದಾಚಾರ್ಯರ “ಉಡುಪಿಯ ಕಂಡೀರಾ” ಶ್ರೀ ಜಯೇಶವಿಠಲದಾಸರ “ಕುಡಿಸೆನಗೆ ಹರಿ ನಿನ್ನ”, ಶ್ರೀ ಕರಿಗಿರಿದಾಸರ “ಏನು ಪುಣ್ಯವ ಮಾಡಿ”, ಹರಪನಹಳ್ಳಿ ಭೀಮವ್ವನವರ “ಭಕ್ತವತ್ಸಲ ಭಯ ನಿವಾರಣ”, ಶ್ರೀ ಪುರಂದರದಾಸರ “ಹರಿನಾಮ ಕೀರ್ತನೆ”, ಶ್ರೀ ಕನಕದಾಸರ “ಮುಟ್ಟಬೇಡಿ ಮುಟ್ಟಬೇಡಿ ಹರಿದಾಸರು” ಇನ್ನೂ ಮುಂತಾದ ಅಪರೂಪದ ಕೃತಿಗಳನ್ನು ಹಾಡಿದರು.
ವಾದ್ಯ ಸಹಕಾರದಲ್ಲಿ ವಿದ್ವಾನ್ ಶ್ರೀ ಗೋವಿಂದಸ್ವಾಮಿ, ಪಿಟೀಲು ನಲ್ಲಿ ವಿದ್ವಾನ್ ಶ್ರೀ ಶ್ರೀನಿವಾಸ್, ಅನಂತರಾಮಯ್ಯ ಮೃದಂಗದಲ್ಲಿ ಸಾಥ್ ನೀಡಿದರು. ಈ ಕಾರ್ಯಕ್ರಮವು ನೆರೆದಿದ್ದ ದಾಸಸಾಹಿತ್ಯಾಭಿಮಾನಿಗಳ ಮನಸೂರೆಗೊಂಡಿತು.
ವರದಿ: ದೇಸಾಯಿ ಸುಧೀಂದ್ರ