ಕಾಯಕ – ಪ್ರೇರಕ

*ರೂಪಾಪ್ರಸಾದ ಕೋಡಿಂಬಳ

ಹೊನ್ನ ಬೆಳಕ ಚೆಲ್ಲಿ ಬಂದ
ಉದಯ ಚೆಲುವ ನೇಸರ
ಹೊಳೆವ ಕಿರಣ ಸೂಸಿ ನಿಂದ
ಗೆಳೆಯ ಕಳೆವ ಬೇಸರ... ||

ವೃಂದೆ ಮೇಲೆ ಹರಡಿ 
ಮುಕುಟವಾಗಿ ಶಿರದಲಿ
ಹಂದರವು ನಾನೆ ಎಂದ
ಲೋಕವಿಹುದು ಕರದಲಿ... ||

ನಿಷ್ಠೆಯಲ್ಲಿ ದಿನವು ಬರುವ
ರವಿಯ ಭವ್ಯ ಕಾಯಕ
ತುಷ್ಟಿಯನ್ನು ನಮಗೆ ಕೊಡುವ
ಕವಿಯ ಕಾವ್ಯಕೆ ಪ್ರೇರಕ... ||

ಇರುಳು ಕಳೆಯೆ ಬೆಳಕು ಬರಲು
ಚೇತನವು ಕಣಕಣದಲಿ
ತೆರಳು ಇಳೆಯ ಬೆಳೆಯ ತರಲು
ಹಸಿವು ನೀಗೊ ಹಣದಲಿ....||

ಏಳು ಬೀಳು ಇಹುದು ಸಹಜ
ಧೈರ್ಯವಿರಲಿ ಬಾಳಲಿ
ತೇರು ಎಳೆದು ಮೆರೆಯೊ ಮನುಜ
ಬಾಳ ಬಂಡಿ ಸಾಗಲಿ..... ||

Related Articles

ಪ್ರತಿಕ್ರಿಯೆ ನೀಡಿ

Latest Articles