ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಕ್ತಿ ಸಂಗೀತ

ಬೆಂಗಳೂರು: ನಗರದ ವಯ್ಯಾಲಿಕಾವಲ್ ನಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಡಿಸೆಂಬರ್ 30 ರಂದು ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ರಚನಾ ಶರ್ಮಾ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

“ಅಲಮೇಲುಮಂಗ ನೀ”, “ದೇವದೇವಂ ಭಜೇ” ಮತ್ತು “ಜೋ ಅಚ್ಯುತಾನಂದ” ಎಂಬ ಮೂರು ಅನ್ನಮಾಚಾರ್ಯರ ಕೀರ್ತನೆಗಳನ್ನು ಹಾಡಿ, ನಂತರ ದಾಸರ ಪದಗಳಾದ “ನೆನೆವೆ ನಾ ಅನ್ಯರ ಕಾಣೆನೋ” (ಪುರಂದರದಾಸರು), ” ಅಂಬರ ಪುರಹರ” (ವಿಜಯದಾಸರು), “ದುರಿತಗಜ ಪಂಚಾನನ” (ಶ್ರೀಪಾದರಾಜರು), “ಕೊಟ್ಟ ಭಾಗ್ಯವೇ ಸಾಕೋ” (ವಿದ್ಯಾಪ್ರಸನ್ನ ತೀರ್ಥರು), “ಮುಟ್ಟಬೇಡಿ ಮುಟ್ಟಬೇಡಿ ಮುರಹರನ ದಾಸರನು” (ಕನಕದಾಸರು), “ಮರುಳು ಮಾಡಿಕೊಂಡೆಯಲ್ಲೆ ಮಾಯಾದೇವಿಯೆ” (ಪುರಂದರದಾಸರು), “ಭಕ್ತವತ್ಸಲ ಭಯ ನಿವಾರಣ” (ಹರಪನಹಳ್ಳಿ ಭೀಮವ್ವ), “ಹರಿಯ ಬಿಟ್ಟವಗೆ ಗತಿಯಿಲ್ಲ” (ಪುರಂದರದಾಸರು), “ಪಲುಕೇ ಬಂಗಾರ ಮಾಯೆನ” (ಭದ್ರಾಚಲಂ ರಾಮದಾಸು) ಮುಂತಾದ ಹಾಡುಗಳನ್ನು ಪ್ರಸ್ತುತ ಪಡಿಸಿದರು.

ವಿದ್ವಾನ್ ಶ್ರೀ ಗೋವಿಂದಸ್ವಾಮಿ ಪಿಟೀಲು, ವಿದ್ವಾನ್ ಶ್ರೀ ಶ್ರೀನಿವಾಸ್ ಅನಂತರಾಮಯ್ಯ ಅವರು ಮೃದಂಗದಲ್ಲಿ ಸಾಥ್ ನೀಡಿದರು.

ವರದಿ: ದೇಸಾಯಿ ಸುಧೀಂದ್ರ

Related Articles

ಪ್ರತಿಕ್ರಿಯೆ ನೀಡಿ

Latest Articles