ಶ್ರೀರಾಯರ ಏಕಶಿಲಾ ಬೃಂದಾವನಕ್ಕೆ ಶ್ರೀ ಪಲಿಮಾರು ಮಠದ ಉಭಯ ಮಠಾಧೀಶರಿಂದ ಅಭಿಷೇಕ

ಬಿಚ್ಚಾಲೆಯ ಶ್ರೀರಾಯರ ಏಕಶಿಲಾ ಬೃಂದಾವನಕ್ಕೆ ಶ್ರೀ ಪಲಿಮಾರು ಮಠದ ಉಭಯ ಮಠಾಧೀಶರಿಂದ 108 ಲೀಟರ್ ಹಾಲಿನ ಹಾಗೂ ಫಲಪಂಚಾಮೃತ ಅಭಿಷೇಕ ಇಂದು ನಡೆಯಿತು.

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಶ್ರೀ ರಾಘವೇಂದ್ರ ಗುರುರಾಯರ ಪುಣ್ಯಕ್ಷೇತ್ರ ಮಂತ್ರಾಲಯವಿದೆ. ಮಂತ್ರಾಲಯದಿಂದ 20 ಕಿ.ಮೀ. ದೂರದಲ್ಲಿ ಬಿಚ್ಚಾಲೆ ಎನ್ನುವ ಹಳ್ಳಿಯಿದೆ. ಶ್ರೀ ರಾಘವೇಂದ್ರ ಸ್ವಾಮಿಗಳು 12 ವರ್ಷಗಳ ಕಾಲವನ್ನು ಈ ಬಿಚ್ಚಾಲೆ ಹಳ್ಳಿಯಲ್ಲಿಯೇ ಕಳೆದರು ಎನ್ನಲಾಗುತ್ತದೆ. ಬಿಚ್ಚಾಲೆಯನ್ನು ಭಿಕ್ಷಾಲಯ ಎಂತಲೂ ಕರೆಯಲಾಗುತ್ತದೆ.

ಮಂತ್ರಾಲಯದಲ್ಲಿ ಆರಾಧಿಸಲಾಗುವ ಎಲ್ಲಾ ಬಗೆಯ ಸಾಂಪ್ರದಾಯಿಕ ಆರಾಧನೆಗಳನ್ನು ಬಿಚ್ಚಾಲೆಯಲ್ಲೂ ಮಾಡಲಾಗುತ್ತದೆ. ಇಲ್ಲಿ ಪ್ರತಿ ವರ್ಷ ಶ್ರೀ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವವು ಬಹಳ ವಿಜೃಂಭಣೆಯಿಂದ ಮೂರು ದಿನಗಳ ಕಾಲ ನಡೆಯುತ್ತದೆ.

Related Articles

ಪ್ರತಿಕ್ರಿಯೆ ನೀಡಿ

Latest Articles