ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ

ಬೆಂಗಳೂರು: ದ ಮಿಥಿಕ್ ಸೊಸೈಟಿ (ಸ್ವಾಮಿ ವಿವೇಕಾನಂದ ಅವರ 158) ನೇ ಜನ್ಮ ದಿನ) ಬಿ ಗುಡ್ ಡು ಗುಡ್ 2021 ರ ಅಭಿಯಾನದ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಿದೆ.
ಪ್ರಬಂಧದ ವಿಷಯ: ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಆತ್ಮನಿರ್ಭರ ಭಾರತ.
ಪ್ರಬಂಧ ಕಳುಹಿಸಲು ಕೊನೆಯ ದಿನ ಜ.31, 2021.
ಪ್ರಥಮ ಬಹುಮಾನ ರೂ.10,000 ಹಾಗೂ ಪ್ರಮಾಣ ಪತ್ರ, ದ್ವಿತೀಯ ರೂ.7500 ಹಾಗೂ ಪ್ರಮಾಣ ಪತ್ರ ತೃತೀಯ ರೂ.5000 ಹಾಗೂ ಪ್ರಮಾಣ ಪತ್ರ ಮತ್ತು ತಲಾ 1,000 ದಂತೆ 20 ಸಮಾಧಾನಕರ ಬಹುಮಾನಗಳು.
ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಪ್ರಬಂಧ ಬರೆಯಬಹುದು. ಪದಗಳ ಮಿತಿ 2500.

ನಿಯಮ:
ಪದವಿ ಯಾ ತತ್ಸಮಾನ, ಸ್ನಾತಕೋತ್ತರ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಕಾಲೇಜು ಪ್ರಾಂಶುಪಾಲರಿಂದ ಅಥವಾ ವಿಭಾಗ ಮುಖ್ಯಸ್ಥರಿಂದ ದೃಢಿಕರಿಸಲ್ಪಟ್ಟ ವ್ಯಾಸಂಗ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಜತೆಗಿರಿಸಬೇಕು.

ಪ್ರಬಂಧ ಕಳುಹಿಸಬೇಕಾದ ವಿಳಾಸ
ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ, ಮಿಥಿಕ್ ಸೊಸೈಟಿ
ನೃಪತುಂಗ ರಸ್ತೆ, ಕೆ.ಆರ್.ವೃತ್ತ ಬಳಿ, ಬೆಂಗಳೂರು, 560001.
ಮಾಹಿತಿಗಾಗಿ: 9113263342, 9483150527, 9611260592.

Related Articles

ಪ್ರತಿಕ್ರಿಯೆ ನೀಡಿ

Latest Articles