ಮೂಕಾಂಬಿಕಾ ಸನ್ನಿಧಿಯಲ್ಲಿ ಗಾನಗಾರುಡಿಗನ ಸಂಗೀತ ಸೇವೆಗೆ ಕೊರೊನಾ ಅಡ್ಡಿ

ಇಂದು ಗಾನಗಂಧರ್ವ ಡಾ.ಕೆ.ಜೆ.ಯೇಸುದಾಸ್ ಅವರ ಹುಟ್ಟುಹಬ್ಬ

ಕೊಲ್ಲೂರು: ಇಂದು ಜನವರಿ 10 ಗಾನಗಂಧರ್ವ ಡಾ. ಕೆ.ಜೆ.ಯೇಸುದಾಸ್ ಅವರಿಗೆ 81ನೇ ವರ್ಷದ ಹುಟ್ಟು ಹಬ್ಬ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಗಾನಸೇವೆಯ ಮೂಲಕ ತನ್ನ ಹುಟ್ಟುಹಬ್ಬವನ್ನುಆಚರಿಸಿಕೊಳ್ಳುತ್ತಿದ್ದರು. ಗಾನಗಾರುಡಿಗರಿಗೆ ಈ ಬಾರಿ ದೇವಿಸನ್ನಿಧಿಯಲ್ಲಿ ಹುಟ್ಟುಹಬ್ಬ ಆಚರಿಸಲು ಕೊರೊನಾ ಅಡ್ಡಿಯಾಗಿದೆ. ಅಮೆರಿಕಾದಲ್ಲಿ ಇರುವ ಅವರಿಗೆ ಕೊಲ್ಲೂರಿಗೆ ಆಗಮಿಸಲು ಕೊರೊನಾ ನಿಯಮಗಳು ಅಡ್ಡಿಪಡಿಸಿದೆ.


ಶ್ರೀ ಮೂಕಾಂಬಿಕಾ ದೇವಿಯ ಪರಮಭಕ್ತರಾದ ಡಾ. ಯೇಸುದಾಸ್ ಅವರು ಪ್ರತಿವರ್ಷ ಜ.9ರಂದು ಶ್ರೀಕ್ಷೇತ್ರಕ್ಕೆ ಆಗಮಿಸಿ ಗಾನಾರ್ಚನೆ ಸಲ್ಲಿಸುತ್ತಿದ್ದರು. ಈ ಬಾರಿ ಅಮೆರಿಕಾದಲ್ಲಿ ತಮ್ಮ ನಿವಾಸದಲ್ಲಿ ವಾಗ್ದೇವಿಗೆ ಗಾನಾರ್ಚನೆ ಸಲ್ಲಿಸಲಿದ್ದಾರೆ. ಕಾರ್ಯಕ್ರಮವನ್ನು ಕೊಲ್ಲೂರು ದೇಗುಲದ ಮಂಟಪದಲ್ಲಿ ಹಾಕಲಾಗಿರುವ ದೊಡ್ಡ ಪರದೆಯ ಮೂಲಕ ಆನ್‌ಲೈನ್‌ನಲ್ಲಿ ಪ್ರಸಾರಗೊಳ್ಳಲಿದೆ.
ಈ ಮೂಲಕ ದೇಗುಲದಲ್ಲಿ ಅವರ ಉಪಸ್ಥಿತಿ ಇಲ್ಲದೇ ಇದ್ದರೂ ಹಾಡಿನ ಮೂಲಕ ದೇವರ ಸೇವೆ ಸಲ್ಲಿಸಲಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles