ಮಂಗಳೂರು: ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಹೊಸದಾಗಿ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಜನವರಿ 12 ರಂದು ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯಂದೇ ಉದ್ಘಾಟನೆಗೊಳ್ಳಲಿದೆ.
ಕಾರ್ಯಕ್ರಮ ಮಂಗಳೂರು ವಿವಿಯ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ ಬೆಳಗ್ಗೆ 9ಗಂಟೆಗೆ ನಡೆಯಲಿದೆ.
ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ಕೇಂದ್ರವನ್ನು ಉದ್ಗಾಟಿಸಲಿದ್ದು,ಚೆನ್ನೈ ರಾಮಕೃಷ್ಣ ಮಠ, ವೇದಾಂತ ಕೇಸರಿ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾದ ಸ್ವಾಮಿ ಮಹಾಮೇಧಾನಂದಜಿ ಅವರು ಭಾಗವಹಿಸಲಿದ್ದಾರೆ.
ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆ ವಹಿಸುವರು. ಪರೀಕ್ಷಾಂಗ ಕುಲಸಚಿವ ಶ್ರೀ ಪ್ರೊ.ಧರ್ಮ ಪಿ.ಎಲ್. ಸ್ವಾಗತ ಭಾಷಣ ಮಾಡಲಿದ್ದಾರೆ. ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯರಾದ ವಿವೇಕಾನಂದ ಪಣಿಯಾಲ, ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸ್ಥಾಪನಾ ಸಮಿತಿ ಸಂಚಾಲಕರಾದ ಡಾ. ಚಂದ್ರು ಹೆಗಡೆ, ಸದಸ್ಯರಾದ ಕೆ.ರಮೇಶ್, ಪ್ರೊ.ಕೆ ಕೃಷ್ಣ ಶರ್ಮ, ಪ್ರೊ. ಸೋಮಣ್ಣ ಉಪಸ್ಥಿತರಿರುವರು ಎಂದು ಮಗಳೂರು ವಿವಿ ಪ್ರಕಟಣೆ ತಿಳಿಸಿದೆ.