ಗಣ್ಯರು, ಮಠಾಧೀಶರು , ಸಾವಿರಾರು ಮಂದಿ ಭಕ್ತರಿಂದ ಅಂತಿಮ ದರ್ಶನ

ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದ ಮಹಾರಾಜ್ ಅವರಿಗೆ ಅಂತಿಮ ನಮನ

ಬೆಂಗಳೂರು: ನಿನ್ನೆ (ಜ.೧೨) ವಿಧಿವಶರಾದ ಬೆಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದ ಅವರ ಅಂತಿಮ ದರ್ಶನಕ್ಕೆ ಅವರ ಸಾವಿರಾರು ಭಕ್ತರು, ಅನುಯಾಯಿಗಳು, ಗಣ್ಯರು ನಿನ್ನೆಯಿಂದ ಭಾಗವಹಿಸಿದ್ದರು.

ಇಂದು ಕೂಡಾ ಬೆಳಗ್ಗೆ 6 ರಿಂದ ಮಧ್ಯಾಹ್ನ 12ರವರೆಗೆ ಶ್ರೀಮಠದ ವಿದ್ಯಾರ್ಥಿ ಮಂದಿರದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈ ಸಂದರ್ಭದಲ್ಲಿ ಶ್ರೀಮಠದಲ್ಲಿ ನಾರಾಯಣ ಉಪಾಸನೆ, ಭಜನೆ, ವೇದಪಠಣ ನಡೆಯಿತು.

ಆಶ್ರಮದ ಆವರಣದಲ್ಲಿ ಸ್ವಾಮಿ ಹರ್ಷಾನಂದ ಮಹಾರಾಜ್ ಅವರ ಪಾರ್ಥೀವ ಶರೀರಕ್ಕೆ ಶಾಸ್ತ್ರೋಕ್ತವಾಗಿ ವಿಧಿವಿಧಾನಗಳು ಜರುಗಲಿದೆ. ನಂತರ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ.

ಅಂತಿಮ ದರ್ಶನಕ್ಕೆ ಆಗಮಿಸಿದ ವಿವಿಧ ಮಠಾಧೀಶರು
ಮಂಗಳವಾರ ಅಗಲಿದ ಬಸವನಗುಡಿಯ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಹರ್ಷಾನಂದ ಜೀ ಅವರಿಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಬುಧವಾರ ನಮನ ಸಲ್ಲಿಸಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles