ನಮ್ರತೆ ಇದ್ದರೆ ಕರುಣಿಸುವಳು ತಾಯಿ ಲಲಿತೆ

* ಪ್ರಕಾಶ್ ಉಳಿತ್ತಾಯ

ನಖದೀಧಿತಿಸಂಛನ್ನನಮಜ್ಜನತಮೋಗುಣಾ|
ಪದದ್ವಯಪ್ರಭಾಜಾಲಪರಾಕೃತಸರೋರುಹಾ||

ತಾಯಿಯ ಪಾದಗಳಿಗೆ ನಮಿಸಿದವರ ಅಜ್ಞಾನವನ್ನು ಮತ್ತು ತಮೋಗುಣವನ್ನು ನಾಶಮಾಡುವಂಥ ಕಿರಣಗಳು ಆಕೆಯ ಪಾದದ ನಖಗಳಿಂದ ಸೂಸುತ್ತಿರುತ್ತವೆ. ಅಂಥ ಪರಮಪಾವನ ಕಿರಣಗಳ ಧ್ಯಾನ ನಮ್ಮ ಮನದ ತಮಸ್ಸನ್ನು ಕಳೆದು ಕೊಳೆಯನ್ನು ತೊಲಗಿಸಿ ಪಾವನ ಮಾಡಲಿ ಎಂಬುದೇ ಪ್ರಾರ್ಥನೆ.  ಹಾಗಾಗಿಯೇ “ನಖದೀಧಿತಿಸಂಛನ್ನನಮಜ್ಜನತಮೋಗುಣಾ”
ದೇವಿಯ ಪಾದಗಳನ್ನು ಕುರಿತ ಧ್ಯಾನ ಮಾಡುವಾಗ ನಮ್ಮ ಜೀವನದ ಪದಗತಿಯು ಈ ಸ್ಮರಣೆಯಿಂದ ಸಮರ್ಪಕವಾಗುತ್ತದೆಂಬ ಸಂಕಲ್ಪದಿಂದ ಕೂಡಿದ್ದರೆ ಭಜಕನ ಜೀವನ ಉಜ್ಜೀವನವಾಗುತ್ತದೆ.
ತಾಯಿಯ ಪಾದಗಳೆರಡರ ಪ್ರಭಾ ಸಮೂಹವು ಕಮಲಗಳ ಪ್ರಭೆಯನ್ನೂ ಮೀರಿಸಿದೆ ಇದು ತಾಯಿಯ ಬಗೆಗೆ ಅತಿಶಯೋಕ್ತಿಯಲ್ಲ-ಆಕೆಗಿದು ಸಹಜವೇ ಸರಿ. ತಾಯಿಯ ಪಾದಗಳ ಸ್ಮರಣೆ ನಮ್ಮ ಜೀವನದ ಪ್ರಭೆಯನ್ನೂ ಉನ್ನತೀಕರಿಸುತ್ತದೆ. ಇದು ಸಕಾರಾತ್ಮಕ ಕ್ರಿಯಾಯೋಗ. ಸಂಕಲ್ಪಯೋಗ. ತಾಯಿಯ ಪ್ರತಿಯೊಂದು ನಾಮದಲ್ಲೂ ಸಕಾರಾತ್ಮಕ ಪರಿಣಾಮ ಕೊಡುವಂಥ ಶಕ್ತಿ ಇದೆ. ನಮ್ಮಲ್ಲಿ ನಮ್ರತೆ ಇದ್ದರೆ ತಾಯಿ ಇದನ್ನು ಕಾಣಿಸುತ್ತಾಳೆ. ನಾಮದ ಶಕ್ತಿ ನಮ್ಮ ಜೀವನದಲ್ಲಿ ಪ್ರತಿಫಲಿಸುವಂತೆ ಮಾಡುತ್ತಾಳೆ.

ಲೇಖಕರು: ಪ್ರಸಿದ್ಧ ಲಯವಾದ್ಯ ವಾದಕರು, ಯಕ್ಷಗಾನ ಕಲಾವಿದರು, ಕರ್ಣಾಟಕ ಬ್ಯಾಂಕ್ ಉದ್ಯೋಗಿ, ಮಂಗಳೂರು

ಚಿತ್ರ: ಪ್ರಸಿದ್ಧಚಿತ್ರ ಕಲಾವಿದ ಬಿಕೆಎಸ್ ವರ್ಮ

Related Articles

ಪ್ರತಿಕ್ರಿಯೆ ನೀಡಿ

Latest Articles