ಸಾಲಿಗ್ರಾಮ ಹಬ್ಬ: ಇಂದು ಬ್ರಹ್ಮರಥೋತ್ಸವ, ನೇರಪ್ರಸಾರ

ಸಾಲಿಗ್ರಾಮ: ಸಾಲಿಗ್ರಾಮ ಹಬ್ಬ ಪ್ರಯುಕ್ತ ಇಲ್ಲಿ ಶ್ರೀ ಗುರುನರಸಿಂಹ ಸ್ವಾಮಿ ದೇಗುಲದಲ್ಲಿ ಜ.15ರಂದು ಬೆಳಗ್ಗೆ ನರಸಿಂಹ ಹೋಮ, ಚರ್ತುವೇದ ಪಾರಾಯಣ, ಸಂಜೆ ಸುತ್ತು ಸೇವೆ, ಕಟ್ಟ ಓಲಗ, ಕಟ್ಟೆಪೂಜೆ, ಪಲ್ಲಕ್ಕಿ ಉತ್ಸವ, ಪುರಮೆರವಣಿಗೆ, ಓಲಗಮಂಟಪ ಸೇವೆ, ಹಿರೇರಂಗಪೂಜೆ, ಪುಷ್ಫರಥೋತ್ಸವ ನಡೆಯಿತು.

16ರಂದು ಬ್ರಹ್ಮರಥೋತ್ಸವ ನಡೆಯಲಿದ್ದು, ಬೆಳಗ್ಗೆ 10.20ಕ್ಕೆ ರಥಾರೋಹಣ, ಸಂಜೆ 6.30ಕ್ಕೆ ರಥಾವರೋಹಣ. ನಂತರ ಓಲಗಮಂಟಪ ಸೇವೆ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ಭೂತಬಲಿ, ಶಯನೋತ್ಸವ ನಡೆಯಲಿದೆ. ಕಾರ್ಯಕ್ರಮದ ನೇರಪ್ರಸಾರವನ್ನುಅಂತರ್ಜಾಲ ತಾಣ CoastalLive.com ನಲ್ಲಿ ಮತ್ತು C4U ಕನ್ನಡ ವಾಹಿನಿಯಲ್ಲಿ ವೀಕ್ಷಿಸಬಹುದಾಗಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles