ಬೆಂಗಳೂರು ಬನಶಂಕರಿ ಜಾತ್ರೆ ಆರಂಭ, ಸರಳ ಸಾಂಕೇತಿಕ ಆಚರಣೆ

ಬೆಂಗಳೂರು: ಶ್ರೀ ಬನಶಂಕರಿ ಅಮ್ಮನವರ ಸಾಂಕೇತಿಕ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಜ.21 ರಿಂದ ಆರಂಭಗೊಂಡಿದ್ದು ಫೆ.1 ರವರೆಗೆ ನಡೆಯಲಿವೆ. ಕೊರೊನಾ ಕಾರಣದಿಂದ ಕೋವಿಡ್ ನಿಯಮಾನುಸಾರವಾಗಿ ಜಾತ್ರೋತ್ಸವ ಕಾರ್ಯಕ್ರಮಗಳು ಸಾಂಕೇತಿಕವಾಗಿ ಸರಳವಾಗಿ ನಡೆಯಲಿವೆ.

ಉತ್ಸವದ ಪ್ರಯುಕ್ತ ಇಂದು ಶುಕ್ರವಾರ ಸಹಸ್ರಮೋದಕ ಶ್ರೀ ಮಹಾಗಣಪತಿ ಹೋಮ ನಡೆಯಿತು.
23ರಂದು ನವಗ್ರಹ ಹೋಮ, ಮೃತ್ಯುಂಜಯ ಹೋಮ, ಪವಮಾನ ಹೋಮ ನಡೆಯಲಿದೆ.
24 ರಂದು ಶ್ರೀ ಲಕ್ಷ್ಮೀನಾರಾಯಣ ಹೃದಯ ಹೋಮ, ಶ್ರೀ ಮಹಾಸುದರ್ಶನ ಹೋಮ, 25ರಂದು ರುದ್ರ ಹೋಮ, 26ರಂದು ಶ್ರೀ ದುರ್ಗಾ ಹೋಮ, ಶ್ರೀ ಸೂಕ್ತ ಹೋಮ, ಶ್ರೀ ಸಾರಸ್ವತ ಹೋಮ, ಸಂಜೆ 6.30ಕ್ಕೆ ದುರ್ಗಾದೀಪ ನಮಸ್ಕಾರ, 27ರಂದು ನವಚಂಡಿಕಾ ಹೋಮ, ಮೂಲದೇವರ ಸನ್ನಿಧಿಯಲ್ಲಿ ವಿಶೇಷ ಪಲ್ಯದ ಹಬ್ಬದ ಪೂಜೆ ನಡೆಯಲಿದೆ.


28 ರಂದು ಬನದ ಹುಣ್ಣಿಮೆ. ಅಂದು ದೇವಾಲಯದ ಆವರಣದಲ್ಲಿ ಬೆಳಗ್ಗೆ 11.45ರಿಂದ 12.45 ರೊಳಗೆ ಸಲ್ಲುವ ಶುಭ ಮೇಷ ಲಗ್ನದಲ್ಲಿ ರಥೋತ್ಸವ ನಡೆಯಲಿದೆ. ಸಂಜೆ 4 ಗಂಟೆಗೆ ರಥಾವರೋಹಣ, ಸಂಜೆ 5 ಗಂಟೆಗೆ ಶ್ರೀ ಶಾಕಾಂಬರಿ ದೇವಿಗೆ ಧೂಳೋತ್ಸವ ನಡೆಯಲಿದೆ.
29 ರಂದು ಸಂಜೆ 7 ಗಂಟೆಗೆ ಶ್ರೀಲಲಿತಾ ಸಹಸ್ರನಾಮ ಹೋಮ, ದೇವಿಗೆ ವಿಶೇಷ ಉಯ್ಯಾಲೋತ್ಸವ, ೩೦ರಂದು ಶ್ರೀ ಶಾಕಾಂಬರಿ ಸಹಸ್ರನಾಮ ಹೋಮ, ಮಧ್ಯಾಹ್ನ 3 ಗಂಟೆಗೆ ವಸಂತೋತ್ಸವ ನಡೆದು ಧ್ವಜಾವರೋಹಣ ನಡೆಯಲಿದೆ.
೩೧ರಂದು ಬೆಳಗ್ಗೆ 9 ಗಂಟೆಗೆ ಗಿರಿಜಾ ಶಂಕರ ಕಲ್ಯಾಣೋತ್ಸವ, ರಾತ್ರಿ 7 ಗಂಟೆಗೆ ಶ್ರೀ ಬನಶಂಕರಿ ದೇವಿಗೆ ಶಯನೋತ್ಸವ, ಫೆಬ್ರವರಿ 1 ರಂದು ಬೆಳಗ್ಗೆ 8.30 ಕ್ಕೆ ಶ್ರೀ ಬನಶಂಕರಿ ದೇವಿಗೆ ಮಹಾಭಿಷೇಕ ನಡೆಯಲಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles