ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ, ನೋಂದಣಿಗೆ ಏಪ್ರಿಲ್ 15 ಕೊನೆ ದಿನ

ಧರ್ಮಸ್ಥಳ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿ ವರ್ಷದಂತೆ ನೆರವೇವೇರಲಿರುವ ಸಾಮೂಹಿಕ ವಿವಾಹವು ಈ ಬಾರಿ 29, ಏಪ್ರಿಲ್ 2021 ರಂದು ಗುರುವಾರ ಸಂಜೆ 6.48 ಕ್ಕೆ ಗೋಧೂಳಿ ಲಗ್ನ ಮುಹೂರ್ತದಲ್ಲಿ ನಡೆಯಲಿದೆ. ಸಾಮೂಹಿಕ ವಿವಾಹವಾಗಲಿಚ್ಛಿಸುವವರು ಏಪ್ರಿಲ್ 15 ರ ಒಳಗಾಗಿ ವಧು- ವರರ ಹೆಸರು ದಾಖಲು ಮಾಡಿಸಬೇಕು.

ವರದಕ್ಷಿಣೆ ಹಾಗೂ ಮದುವೆಗಾಗುವ ದುಂದುವೆಚ್ಚವನ್ನು ತಡೆಯುವ ಉದ್ದೇಶದಿಂದ ಧರ್ಮಾಧಿಕಾರಿಯವರಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು 1972ರಲ್ಲಿ ಆರಂಭಿಸಿದ ಉಚಿತ ಸಾಮೂಹಿಕ ವಿವಾಹವನ್ನು ಪ್ರತಿವರ್ಷ ನಡೆಸಲಾಗುತ್ತಿದೆ.
ವಿವಾಹವಾಗಲಿಚ್ಛಿಸುವವರು ಬರುವಾಗ ಮಂಡಲ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಯಾ ಕಾರ್ಯದರ್ಶಿ ಅವರಿಂದ ವಧೂ- ವರರ ಹೆಸರು, ಪ್ರಾಯ, ಹಿರಿಯರ ಒಪ್ಪಿಗೆ ಹಾಗೂ ಅವಿವಾಹಿತ ಅವಶ್ಯ ದೃಢಪತ್ರಿಕೆ ಮತ್ತು ವಧೂ- ವರರ ಇತ್ತೀಚಿನ ಭಾವಚಿತ್ರ ಒಂದೊಂದು (ಪಾಸ್‌ಪೋರ್ಟ್ ಅಳತೆ) ತರಬೇಕು.
ವರನಿಗೆ ಧೋತಿ, ಶಾಲು, ವಧುವಿಗೆ ಸೀರೆ, ರವಿಕೆ ಕಣ ಮತ್ತು ಮಂಗಳಸೂತ್ರವನ್ನು ಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಶ್ರೀಕ್ಷೇತ್ರದ ಮುಖ್ಯ ಮಾಹಿತಿ ಕಚೇರಿಯ ಕಟ್ಟಡದಲ್ಲಿರುವ ಸಾಮೂಹಿಕ ವಿವಾಹದ ನೋಂದಣಿ ಕಚೇರಿಯನ್ನು ಸಂಪರ್ಕಿಸಬಹುದು.


ಸಂಪರ್ಕಿಸಲು ದೂರವಾಣಿ: 08256- 266644/ 9663464648

Related Articles

ಪ್ರತಿಕ್ರಿಯೆ ನೀಡಿ

Latest Articles