ಜ.30 ಸರ್ವೋದಯ ದಿನದ ಅಂಗವಾಗಿ ಕರ್ನಾಟಕ ಸರ್ವೋದಯ ಮಂಡಲ ಮತ್ತು ಅಮರ ಬಾಪು ಚಿಂತನ ಸಹಯೋಗಯಲ್ಲಿ ನಡೆದ ‘ಸರ್ವೋದಯ ಸಮಾಜ ಸೃಷ್ಟಿಯ ಸಾಧ್ಯತೆಗಳು – ಒಂದು ವಿಶ್ಲೇಷಣೆ’ ಲೇಖನ ಮತ್ತು ಗಾಂಧಿ ಚಿಂತನೆ ಹಾಗೂ ಇಂದಿನ ಪರಿಸ್ಥಿತಿ ಮತ್ತು ಸವಾಲುಗಳನ್ನು ಕುರಿತು ‘ಗಾಂಧಿಗೆ ಒಂದು ಪತ್ರ’ ಈ ಎರಡು ಕನ್ನಡ ಲೇಖನ ಸ್ಪರ್ಧೆ ಏರ್ಪಡಿಸಿತ್ತು.
ಬಹುಮಾನ ವಿಜೇತ ಪ್ರಬಂಧ ಮತ್ತು ಪತ್ರ ಬರಹಗಳನ್ನು ಕ್ರಮವಾಗಿ ಜೀರಿಗೆ ಲೋಕೇಶ್ ಸಂಪಾದಕತ್ವದ ಅಮರ ಬಾಪು ಚಿಂತನ ಸಂಚಿಕೆಗಳಲ್ಲಿ ಪ್ರಕಟಿಸಲಾಗುವುದು. ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ಸರ್ವೋದಯ ಮಂಡಲಿಯ ಕಾರ್ಯದರ್ಶಿ ಡಾ. ಹೆಚ್. ಎಸ್. ಸುರೇಶ್ ತಿಳಿಸಿರುತ್ತಾರೆ.
15 ರಿಂದ 29 ವಯೋಮಿತಿಯ ಯುವಜನರಿಗಾಗಿ ಏರ್ಪಡಿಸಿದ್ದ ಈ ಸ್ಪರ್ಧೆ ಗಾಂಧೀಜಿ ಇಂದಿಗೂ ಯುವ ಮನಸ್ಸುಗಳ ಆದರ್ಶ ಹಾಗೂ ಆಕರ್ಷಣೆಯ ವ್ಯಕ್ತಿಯಾಗಿ ಉಳಿದಿದ್ದಾರೆ ಅನ್ನುವ ಸಮಾಧಾನ ದೊರಕುತ್ತದೆ. ಅಸ್ಪೃಶ್ಯತೆ , ಲಂಚ, ತತ್ವವಿಲ್ಲದ ರಾಜಕಾರಣ, ಚುನಾವಣಾ ಭ್ರಷ್ಟತೆ ಇವುಗಳ ಕುರಿತು ಆಕ್ರೋಶ ಇದ್ದರೂ ಗಾಂಧೀ ಮಾರ್ಗದಲ್ಲಿ ದೇಶ ಸಾಧಿಸಿದ ಪ್ರಗತಿಯ ಬಗ್ಗೆ ಮೆಚ್ಚಗೆಯ ಮಾತುಗಳನ್ನೂ ಈ ಲೇಖನಗಳಲ್ಲಿ ಗಮನಿಸಬಹುದು. ಎಲ್ಲ ಸ್ಪರ್ಧಿಗಳೂ ಗಾಂಧಿ ಮಾರ್ಗ ಮತ್ತು ಮೌಲ್ಯಗಳ ಪ್ರಸ್ತುತತೆಯನ್ನು ಎತ್ತಿ ಹಿಡಿದಿರುವುದು ಈ ಬರಹಗಳಲ್ಲಿ ಕಂಡು ಬರುತ್ತದೆ ಎಂದು ತೀರ್ಪುಗಾರರ ಮಂಡಲಿಯ ಪರವಾಗಿ ನಿವೃತ್ತ ಶಿಕ್ಷಕ ಡಾ. ಯ. ಚಿ. ದೊಡ್ಡಯ್ಯ ಹಾಗೂ ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ತಿಳಿಸಿರುತ್ತಾರೆ.
ವಿವರಗಳಿಗೆ : 9035618076/ 9448027400
ಪತ್ರ ಸ್ಪರ್ಧೆಯ ಬಹುಮಾನ ವಿಜೇತರ ಪಟ್ಟಿ
– ಬೀರೇಶ್.ಎನ್. ನೆಟಗಲ್ಲಣ್ಣನವರ, ಹಿರೇಲಿಂಗದಹಳ್ಳಿ, ಕುರುಬಗೊಂಡ (ಅಂಚೆ), ಹಾವೇರಿ ಜಿಲ್ಲೆ – ಪ್ರಥಮ
– ಅನ್ವಿತಾ ಕುಲಕರ್ಣಿ , ಲೋಕಾಪೂರ , ಮುಧೋಳ ತಾ|| , ಬಾಗಲಕೋಟೆ – ದ್ವಿತೀಯ
- ಮಯೂರ್, ಕುಳಾಯಿ , ಮಂಗಳೂರು – ತೃತೀಯ
- ಅನುರಾಧ ಬಿಲ್ಕರ್ , ಹಂಪಿನಗರ, ಬೆಂಗಳೂರು – ಚತುರ್ಥ
ಪ್ರೋತ್ಸಾಹಕ ಬಹುಮಾನಿತರು
- ಅನುಷಾ. ಕಿರಣ. ಬಾಳಗೋಳ, ಲಿಂಗಾಪೂರ , ಬೀಳಗಿ , ಬಾಗಲಕೋಟೆ
- ಪ್ರದೀಪ್ ಎಂ. ಪಾಟೀಲ್ , ಮಧುಗಿರಿ, ತುಮಕೂರು ಜಿಲ್ಲೆ
- ವಿಶ್ವನಾಥ್ ಎನ್ , ನೇರಳಕಟ್ಟೆ
- ಡಾ. ಕಾರ್ತಿಕ್, ಬೆಂಗಳೂರು
ಮೆಚ್ಚುಗೆ ಪಡೆದವರು
-ಪ್ರದೀಪ್ ಖಾನಾಪುರ, ಐನಾಪೂರ , ವಿಜಯಪುರ
-ಸಂದೇಶ್. ಜೆ. ಹರಿಜನ, ಕೋಳೂರು , ಹಾವೇರಿ. ತಾ/ಜಿಲ್ಲೆ. - ಚೇತನ್. ವಿ, ಓಕಳಿಪುರಂ, ಬೆಂಗಳೂರು
- ನಂದಿತಾ ಎಸ್. ಡಿ., ಸಕಲೇಶಪುರ
ಲೇಖನ ಸ್ಪರ್ಧೆಯ ಬಹುಮಾನ ವಿಜೇತರ ಪಟ್ಟಿ - ಅನ್ನಪೂರ್ಣ ಬೈಂದೂರು , ಉಡುಪಿ ಜಿಲ್ಲೆ – ಪ್ರಥಮ
- ಕೀರ್ತನ ಎ. ಎಂ., ಮೈಸೂರು- ದ್ವಿತೀಯ
- ರಂಜಿತಾ ಹೆಬ್ಬಾರ್ , ಬಸರಿಕಟ್ಟೆ ಪೋ.ಕೊಪ್ಪ ತಾಲೂಕು, ಚಿಕ್ಕಮಗಳೂರು – ತೃತೀಯ
- ಪೂಜಾ ಡಿ. ಜಿ , ಬನ್ನೇರುಘಟ್ಟ ರಸ್ತೆ , ಬೆಂಗಳೂರು – ಚತುರ್ಥ
ಪ್ರೋತ್ಸಾಹಕ ಬಹುಮಾನಿತರು - ಅಶ್ವಿನಿ ಎಂ. ಹಾದಿಮನಿ , ಹುನಗುಂದ, ಬಾಗಲಕೋಟೆ
- ಶ್ರೀಶೈಲ ಹಂಜಿ , ಮಾಜಿ ಸೈನಿಕ, ಕನಕ ನಗರ , ಅಥಣಿ
- ವೈಷ್ಣವಿ ಪುರಾಣಿಕ್, ಕುಂಭಾಶಿ, ಕೋಟೇಶ್ವರ
- ದಸ್ತಗಿರಿ ಸಾಬ ಅ ಹುಸೇನ ಬಾಯಿ, ಬದಾಮಿ
ಮೆಚ್ಚುಗೆ ಪಡೆದವರು - ಅನಿಲ್ ಕುಮಾರ್ ಹೊಸಮನಿ, ಹಾನಗಲ್
- ವೀರೇಶ್ ಪವಡಿ , ದೇವದುರ್ಗ, ರಾಯಚೂರು