ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರನ್ನು ಅಮೆರಿಕದ ವಿಶ್ವವಿದ್ಯಾಲಯ ‘ಜಾಗತಿಕ ಪೌರತ್ವ ರಾಯಭಾರಿ’ ಎಂದು ಗುರುತಿಸಿದೆ.
ದ ನಾರ್ತ್ ಈಸ್ಟರ್ನ್ ಯುನಿವರ್ಸಿಟಿ ಸೆಂಟರ್ ಫಾರ್ ಸ್ಪಿರಿಚುಯಲ್ ಡೈಲಾಗ್ ಮತ್ತು ಸರ್ವಿಸ್ ಕಳೆದ ವಾರ ಗುರೂಜಿ ಅವರನ್ನು ತನ್ನ ಸಂಸ್ಥೆಯ ಜಾಗತಿಕ ಪೌರತ್ವ ರಾಯಭಾರಿ ಎಂದು ಗುರುತಿಸಿದೆ.
ಶಾಂತಿ ಹಾಗೂ ಸಮಾಜಕ್ಕೆ ಆಧ್ಯಾತ್ಮಿಕ ಗುರುವಾಗಿ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಗೌರವವನ್ನು ನೀಡಲಾಗಿದೆ ಎಂದು ವಿವಿ ಹೇಳಿಕೊಂಡಿದೆ.