ಅಂಗವಿಕಲ ಮಕ್ಕಳಿಗೆ ಬೆಳಕಾದ ಶಿಕ್ಷಕ ಶಿವಭೋಧ ಮಠಪತಿ

  • ಈಶ್ವರ ಢವಳೇಶ್ವರ
ಶಿವಭೋಧ ಮಠಪತಿ

ಕಲಾ ಪ್ರಕಾರಗಳಲ್ಲಿ ಒಂದಾಗಿರುವ ಚಿತ್ರಕಲೆ ಒಂದು ರೀತಿಯಲ್ಲಿ ಸಾಗರ. ಅದರ ವಿಸ್ತಾರ ಊಹೆಗೂ ನಿಲುಕದ್ದು. ಚಿತ್ರಕಲೆ ಹುಟ್ಟಿದ್ದು, ಅದು ಬೆಳೆದು ಬಂದ ಹಾದಿಯನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಇಂತಹ ಕಲೆಯಲ್ಲಿ ತೊಡಗಿದವರು ಶಿವಭೋಧ ಮಠಪತಿ.

ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ನಿವಾಸಿಯಾದ ಇವರು ಕಲೆಯನ್ನೇ ತಮ್ಮ ವೃತ್ತಿಯನ್ನಾಗಿಸಿ ಕೊಂಡಿದ್ದಾರೆ. ಮಧ್ಯಮವರ್ಗದ ಮನೆಯಲ್ಲಿ ಹುಟ್ಟಿದಂತ ಇವರು ಆಯ್ಕೆಮಾಡಿದ್ದು ಕಲೆ. ಚಿಕ್ಕಂದಿನಿಂದಲೂ ಕಲೆಯನ್ನೇ ತಮ್ಮ ಆಟ ಮಾಡಿಕೊಂಡವರು. ತಮ್ಮ ಕಲೆಯನ್ನು ವಿಸ್ತಾರ ಗೊಳಿಸಬೇಕು ಎಂಬ ಆಸೆಯಿಂದ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಗದುಗಿನ ತೋಂಟದಾರ್ಯ ಮಠದಲ್ಲಿ ವಿದ್ಯಾಭ್ಯಾಸ ಕೈಗೊಂಡು ಸ್ನಾತಕೋತ್ತರ ಪದವಿಯನ್ನು ಪಡೆದರು. ಇವರ ಅದ್ಭುತವಾದ ಕಲೆಗೆ ಬೆಂಗಳೂರಿನ ದಿ ಅಸೋಶಿಯೇಶನ್ ಅಫ್ ಪೀಪಲೆ ವಿತ್ ಡಿಸೆಬಿಲಿಟಿ (ಎಪಿಡಿ) ಸಂಸ್ಥೆಯವರು ಇವರನ್ನು ಆಯ್ಕೆ ಮಾಡಿಕೊಂಡರು.

ತಮ್ಮ ವಿನೂತನ ಚಿತ್ರ ಕಲೆಯ ಸೇವೆಗೆ ಅನೇಕ ಪ್ರಶಸ್ತಿಗಳು ಇವರ ಕೈ ಸೇರಿದವು. ಅನೇಕ ಸಂಘ-ಸಂಸ್ಥೆಗಳು ಇವರನ್ನು ಅಭಿನಂದಿಸಿದರು. ಸುಮಾರು ಎರಡು ಸಾವಿರಕ್ಕಿಂತ ಹೆಚ್ಚು ಅಂಗವಿಕಲ ವಿದ್ಯಾರ್ಥಿಗಳಿಗೆ ಚಿತ್ರಕಲೆಯನ್ನು ಕಲಿಸಿದ ಗುರುಗಳು. ಇವರು ಪ್ರತಿಯೊಂದು ಮಗುವೂ ಒಬ್ಬ ಶ್ರೇಷ್ಠ ಕಲಾವಿದ. ಚಿತ್ರಗಳು ಮಕ್ಕಳ ಭಾಷೆ ಅವರಿಗೆ ಮೊದಲು ಬರುವುದೇ ಚಿತ್ರಕಲೆ. ಅನಂತರ ಬರಹ ಚಿತ್ರ ಬಿಡಿಸುವದು ಅವರಿಗೆ ಆನಂದ.

ನಮ್ಮ ಸಮಾಜದ ಎಲ್ಲ ವರ್ಗಗಳ ಪ್ರತಿಶತ 80 ಮಕ್ಕಳು ಇಷ್ಟಪಡುವ ಅದಕ್ಕಿಂತಲೂ ಹೆಚ್ಚು ಸಮಯವನ್ನು ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳಲು ಇಚ್ಚಿಸುವುದನ್ನು ಕಾಣಬಹುದು. ಚಿತ್ರಕಲೆಯು ಶಿಶುಗಳ ರಚನಾ ಸಾಮರ್ಥ್ಯದ ಬೆಳವಣಿಗೆಗೆ ಭಾವಾಭಿವ್ಯಕ್ತಿ ಕಲ್ಪನಾಶಕ್ತಿ ವೃದ್ಧಿಸುವುದರ ಅವಕಾಶ ನೀಡುತ್ತದೆ. ಕೆಲವು ಹಂತಗಳಲ್ಲಿ ಮಗು ಮಾತಿನಲ್ಲಿ ವ್ಯಕ್ತಪಡಿಸಲಾಗದ ತನ್ನ ಸಂವೇದನೆಯನ್ನು ಹೊರಗೆಡವಲು ಚಿತ್ರಕಲೆಯಂತಹ ಮೌನ ಭಾಷೆಯನ್ನು ಅವಲಂಬಿಸುತ್ತದೆ. ಚಿತ್ರಕಲೆ ಎಂಬ ವರ್ಣಮಯ ಕ್ರಿಯೆ ಮಗುವಿನ ಆಪ್ತಮಿತ್ರನಂತೆ. ಯಾಕೆಂದರೆ ತಾನು ರೂಪಿಸಿದ ಚಿತ್ರದ ಮೂಲಕ ಮನಸ್ಸಿನಲ್ಲಿರುವ ಅದೃಶ್ಯವಾದ ಅನೇಕ ಭಾವನೆಗಳ ಸ್ವರೂಪಗಳನ್ನು ತಾನೇ ಸೃಷ್ಟಿಸಿ ಅದನ್ನು ನೋಡಿ ಆನಂದಿಸುತ್ತಾರೆ.

ಅಂಗವಿಕಲತೆಯಲ್ಲಿಯೂ ಸಹ ಕುಂಚ ಹಿಡಿಯಲು ಕಲಿಸಿದವರು ಶಿವಭೋಧ ಮಠಪತಿಯವರು. ಇವರ ಸಾಧನೆಗೆ ದೇಶವಿದೇಶಗಳಿಂದ ಅನೇಕ ಪ್ರಶಸ್ತಿಗಳು ಇವರನ್ನರಸಿ ಬಂದಿವೆ.

ಮೂಡಲಗಿ ಪಟ್ಟಣದಲ್ಲಿ ಪ್ರಪ್ರಥಮ ಬಾರಿಗೆ ಹಮ್ಮಿಕೊಳ್ಳಲಾಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶಿವಭೋಧ ಮಠಪತಿಯವರ ಚಿತ್ರಕಲಾ ಸಾಧನೆಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಒಟ್ಟು ಕನಾ೯ಟಕದಲ್ಲಿ 150 ಕಲಾ ಶಿಬಿರಗಳನ್ನು ಮಾಡಿರುವ ಇವರು 220 ಕಲಾ ಪ್ರದರ್ಶನಗಳನ್ನು ಮಾಡಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles