ಪುರಂದರದಾಸರ ಆರಾಧನೆ, ದಾಸವಾಣಿ ಸಂಸ್ಥೆಯ ವಾರ್ಷಿಕೋತ್ಸವ

ಬೆಂಗಳೂರು: ಪುರಂದರದಾಸರ ಆರಾಧನೆ ಹಾಗೂ ದಾಸವಾಣಿ ಸಂಸ್ಥೆಯ ವಾರ್ಷಿಕೋತ್ಸವ ಪ್ರಯುಕ್ತ ಫೆ.20 ರಂದು ಸಂಜೆ 4 ಗಂಟೆಯಿ0ದ 7.45 ರವರೆಗೆ ಮಲ್ಲೇಶ್ವರಂನ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ರಾಮಮಂದಿರದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ವಿದ್ವಾನ್ ಹುಸೇನ್‌ಸಾಬ್‌ದಾಸ್ ಅವರು ಭಾಗವಹಿಸಲಿದ್ದಾರೆ. ಮಂಗಳಾ0ಗ ಹರಿವಿಠಲಾಂಕಿತ ಹರಿದಾಸಿಣಿ ಡಾ. ಎನ್.ಜಿ. ವಿಜಯಲಕ್ಷ್ಮಿ, ದಾಸವಾಣಿ ಸಂಸ್ಥೆಯ ಹಿರಿಯ ಸದಸ್ಯರುಗಳಾದ ಶ್ರೀನಿವಾಸ ರಾವ್, ಜಿ.ಎಸ್ ಕೃಷ್ಣಮೂರ್ತಿ ಹಾಗೂ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಚಾರಕರೂ, ಕಲಾವಿದರ ಪ್ರೋತ್ಸಾಹಕರೂ ಆದ ದೇಸಾಯಿ ಸುಧೀಂದ್ರ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಗಾಯಕಿಯರಾದ ಸಂಧ್ಯಾ ಶ್ರೀನಾಥ್, ಮಾನಸಾ ಕುಲಕರ್ಣಿ, ರಶ್ಮಿ ಮಧುಸೂದನ್, ರೂಪಶ್ರೀ ಪ್ರಭಂಜನ, ವಿಜಯಾ ಭಟ್, ಭವಾನಿ ಭುವನ್, ಚಾಂದಿನಿ ಗರ್ತಿಗೆರೆ, ವಾಣಿಶ್ರೀ ಸುನೀಲ್, ಗೌರಿ ಕುಲಕರ್ಣಿ, ವಾಣಿಶ್ರೀ ರಾಮಕೃಷ್ಣ, ರಚನಾ ಶರ್ಮಾ, ದ್ಯುತಿ ಜಹಗೀರ್ದಾರ್, ಸ್ನಿಗ್ಧ ಜಹಾಗೀರ್‌ದಾರ್ ಸೇರಿದಂತೆ ಹಲವು ಕಿರಿಯ ಗಾಯಕರು ದಾಸವಾಣಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಪಕ್ಕವಾದ್ಯದಲ್ಲಿ ವಿದ್ವಾನ್ ಶಶಿಧರ್ (ಪಿಟೀಲು), ವಿದ್ವಾನ್ ಶ್ರೀನಿವಾಸ್ ಅನಂತರಾಮಯ್ಯ (ಮೃದಂಗ), ವಿದ್ವಾನ್ ಪ್ರಕಾಶ್ (ಕೀ ಬೋರ್ಡ್), ವಿದ್ವಾನ್ ಶ್ರೀನಿವಾಸ್ ಕಾಖಂಡಕಿ (ತಬಲಾ) ದಲ್ಲಿ ಸಹಕರಿಸಲಿದ್ದಾರೆ.

ಇದೇ ಕಾರ್ಯಕ್ರಮದಲ್ಲಿಸಂಜೆ 5.30 ಕ್ಕೆ ಕುಮಾರಿ ಸಮನ ಸಕ್ರಿ ಹಾಗೂ ಸಂಜೆ 6.15 ರಿಂದ ಕುಮಾರಿ ದಿಯಾ ಉದಯ್ ಅವರಿಂದ ಭರತನಾಟ್ಯ.
ಎಲ್ಲಾ ಗಾಯಕರು ಪುರಂದರದಾಸರ “ನವರತ್ನ ಮಾಲಿಕೆ’ಯ ಸಮೂಹ ಗಾಯನ ಪ್ರಸ್ತುತಪಡಿಸಲಿದ್ದಾರೆ. ಪ್ರವೀಣಕುಲಕರ್ಣಿ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles