ಫೆ.21 ರಂದು ಮಧ್ವನವಮಿ ಆಚರಣೆ ಪ್ರಯುಕ್ತ ವಿವಿಧ ಕಾರ್ಯಕ್ರಮ

ಬೆಂಗಳೂರು: ಮಧ್ವನವಮಿ ಆಚರಣೆ ಪ್ರಯುಕ್ತ ತೌಳವ ಮಾಧ್ವ ಒಕ್ಕೂಟ ಬೆಂಗಳೂರು, ಶ್ರೀ ಪುತ್ತಿಗೆ ಮಠ ಬೆಂಗಳೂರು ಹಾಗೂ ಶ್ರೀ ಸುಬ್ರಹ್ಮಣ್ಯ ಮಠ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಸುಗುಣೇಂದ್ರ ತೀರ್ಥರು ಹಾಗೂ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರ ಆಶೀರ್ವಾದಗಳೊಂದಿಗೆ
ಬಸವನಗುಡಿಯ ಶ್ರೀ ಉಡುಪಿ ಪುತ್ತಿಗೆ ಮಠದ ಶ್ರೀ ಗೋವರ್ಧನಗಿರಿ ಗುಹಾಲಯ ಕ್ಷೇತ್ರದಲ್ಲಿ ಫೆ.21 ರಂದು ಬೆಳಗ್ಗೆ 7 ರಿಂದ ಸಂಜೆ 6.30 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಶ್ರೀ ಸುಗುಣೇಂದ್ರ ತೀರ್ಥರು ಹಾಗೂ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ


ಬೆಳಗ್ಗೆ 8 ರಿಂದ ರಜತ ಪಲ್ಲಕ್ಕಿಯಲ್ಲಿ ಶ್ರೀ ಮಧ್ವರ ಮೂರ್ತಿಯ ಮೆರವಣಿಗೆ ಶ್ರೀ ಪುತ್ತಿಗೆ ಮಠದಿಂದ ಶ್ರೀ ಸುಬ್ರಹ್ಮöಣ್ಯ ಮಠಕ್ಕೆ ಭಜನೆ, ಚಂಡೆ, ಜಾಗಟೆ, ಶಂಖನಾದಗಳೊ0ದಿಗೆ ಮೆರವಣಿಗೆ ನಡೆಯಲಿದೆ. ಮೆರವಣಿಗೆ ಪುತ್ತಿಗೆ ಮಠದಿಂದ ಹೊರಟು ದೊಡ್ಡ ಗಣಪತಿ ದೇವಸ್ಥಾನ-ಬ್ಯುಗಲ್ ರಾಕ್ ರೋಡ್-ಈಟ್ ಸ್ಟಿçÃಟ್ – ಸುಬ್ರಹ್ಮಣ್ಯ ಮಠ-ಮಲ್ಲಿಕಾರ್ಜುನ ಟೆಂಪಲ್ ರೋಡ್, ಬುಲ್ ಟೆಂಪಲ್‌ರೋಡ್‌ನಲ್ಲಿ ಸಾಗಲಿದೆ.
ಮುದ್ರಾಕಲ್ಚರಲ್ ಅಕಾಡೆಮಿಯ ರೂಪಶ್ರೀ ರೋಹಿತ್ ಅವರಿಂದ ನೃತ್ಯ ಸೇವೆ ನಡೆಯಲಿದೆ.
ಬೆಳಗ್ಗೆ 7 ಗಂಟೆಗೆ ಶ್ರೀ ಮಧ್ವನಾಮಾವಳಿ ಧ್ವನಿ ಸುರುಳಿಯನ್ನು ವಿದ್ವಾನ್ ವಿಜಯಸಿಂಹಾಚಾರ್ಯ ಅವರು ಬಿಡುಗಡೆಗೊಳಿಸಲಿದ್ದಾರೆ. ನಂತರ 11 ಗಂಟೆಗೆ ಅನಂತಪದ್ಮನಾಭ ಭಟ್ ಕಾರ್ಕಳ ಅವರಿಂದ ಹರಿಕಥಾ ಸತ್ಸಂಗ. ರಮೇಶ್ ಹೆಬ್ಬಾರ್ ಹಾರ್ಮೋನಿಯಂ ಹಾಗೂ ಪ್ರದೀಪ್ ಉಪಾಧ್ಯಾಯ ತಬಲಾ ದಲ್ಲಿ ಸಹಕರಿಸಲಿದ್ದಾರೆ.
ಮಧ್ಯಾಹ್ನ1 ಗಂಟೆಗೆ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 2 ರಿಂದ ವಿದುಷಿ ಶೋಭಾ ನರಸಿಂಹನ್ ಮತ್ತು ಬಳಗದವರಿಂದ ವೀಣಾವಾದನ. 3 ಗಂಟೆಗೆ ಯುವ ವಿಚಾರ ಮಂಥನ. ಧಾರ್ಮಿಕ ಪ್ರಜ್ಞೆ ಕುರಿತು ಅಕ್ಷಯ್ ಆಚಾರ್ಯ, ಸ್ಫೂರ್ತಿ ರಾವ್, ಶ್ರವಣ್ ಕುಮಾರ್, ವಾಸು ಉಡುಪ ಅವರಿಂದ ವಿಷಯ ಮಂಡನೆ. ಕೆ.ವಿ ರಮಣಾಚಾರ್ ಸಮನ್ವಯಕಾರರಾಗಿ ಭಾಗವಹಿಸಲಿದ್ದಾರೆ.

4.15 ಕ್ಕೆ ವ್ಯಾಸ ದಾಸ ಸಾಹಿತ್ಯ ಮಹಿಮೆ, ಭಕ್ತ ಶ್ರೀ ಗೋವಿಂದದಾಸ ಭಜನಾ ಪದ್ಧತಿ ಕುರಿತು ಶ್ರೀ ಕುತ್ತೆತ್ತೂರು ಗುರುಪ್ರಸಾದ್ ಮತ್ತು ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಂಶುಪಾಲರಾದ ಕೆ. ಸತ್ಯನಾರಾಯಣಾಚಾರ್ ಉಪನ್ಯಾಸ ನೀಡುವರು. ಚೆನ್ನೈನ ಗಂಗಾಪ್ರಸಾದ್ ಅತಿಥಿಗಳಾಗಿ ಭಾಗವಹಿಸುವರು.
ಸಂಜೆ 4.30 ರಿಂದ ಮಕ್ಕಳಿಗೆ ಚಿತ್ರ ಲೇಖನ ಸ್ಪರ್ಧೆ, 6.30 ಕ್ಕೆ ತೌಳವ ವೇದಾಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಬಹುಮಾನ ವಿತರಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles