ಇಸ್ಕಾನ್‌ನಲ್ಲಿ ಶ್ರೀಕೃಷ್ಣ ಬಲರಾಮ ರಥಯಾತ್ರೆ

ಬೆಂಗಳೂರು: ಇಸ್ಕಾನ್ ಬೆಂಗಳೂರು ವತಿಯಿಂದ ವಾರ್ಷಿಕ ಶ್ರೀಕೃಷ್ಣ ಬಲರಾಮ ರಥಯಾತ್ರೆ ಫೆ.20 ರಂದು ನಡೆಯಿತು.
ಬೆಂಗಳೂರು ನಗರವು ಕೋವಿಡ್ ಸಾಂಕ್ರಾಮಿಕ ರೋಗದಿಂದ ಇನ್ನೂ ಪೂರ್ಣವಾಗಿ ಮುಕ್ತವಾಗಿಲ್ಲದಿರುವ ಕಾರಣ ಮತ್ತು ಪ್ರಸ್ತುತ ಸರ್ಕಾರದ ನಿಯಂತ್ರಣಗಳ ಹಿನ್ನೆಲೆಯಲ್ಲಿ ರಥ ಯಾತ್ರೆಯನ್ನು ಮಂದಿರದ ಆವರಣದೊಳಗೆ ಸೀಮಿತಗೊಳಿಸಲಾಗಿತ್ತು. ಆದರೆ ಅಸಂಖ್ಯ ಭಕ್ತರು ರಥಯಾತ್ರೆಯನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಿದರು.


ಪ್ರತಿವರ್ಷ ರಥಯಾಥ್ರೆಯು ಕಾರ್ಡ್ ರಸ್ತೆ, ರಾಜಾಜಿನಗರ ಮತ್ತು ಮಹಾಲಕ್ಷಿö್ಮÃ ಬಡಾವಣೆಗಳ ಮೂಲಕ ಸಾಗಿ ಅಸಂಖ್ಯ ಭಕ್ತರಿಗೆ ದರ್ಶನ ಭಾಗ್ಯ ನೀಡುತ್ತಿತ್ತು. ಆದರೆ ಈ ಬಾರಿ ಕೋವಿಡ್ ಕಾರಣದಿಂದ ಮಂದದಿರದೊಳಗೆ ರಥೋತ್ಸವ ನೆರವೇರಿಸಲಾಯಿತು.


ಸಚಿವ ಕೆ.ಗೋಪಾಲಯ್ಯ, ಎಸ್ ಹರೀಶ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇಸ್ಕಾನ್ ಮಂದಿರದ ಭಕ್ತರು ಹರೇಕೃಷ್ಣ ಸಂಕರ್ತನೆ ನಡೆಸಿಕೊಟ್ಟರು. ಮೃದಂಗ ಮತ್ತು ಕರತಾಳಗಳ ಸಾಥ್ ಸಂಕೀರ್ತನೆಗೆ ಇನ್ನಷ್ಟು ಮೆರುಗು ನೀಡಿದವು. ಶ್ರೀಕೃಷ್ಣ ಬಲರಾಮರ ರಥ ಯಾತ್ರೆಯು ಸಾಗಿದ ಸಣ್ಣ ಮಾರ್ಗದಲ್ಲಿಯೇ ಭಕ್ತರು ಸಂಕೀರ್ತನೆ ಹಾಡುತ್ತಾ ನರ್ತಿಸಿದರು. ನೆರೆದಿದ್ದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ನಂತರ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.

Related Articles

ಪ್ರತಿಕ್ರಿಯೆ ನೀಡಿ

Latest Articles